ಅನುಗ್ರಹ ಕಣ್ಣಿನ ಆಸ್ಪತ್ರೆಯಿಂದ ಕಣ್ಣಿನ ಯಶಸ್ವಿ ಶಸ್ತ್ರ ಚಿಕಿತ್ಸೆ
ತಾಳಿಕೋಟೆ:ಜೂ.14: ವಿಜಯಪುರದ ಅನುಗ್ರಹ ವ್ಹಿಜನ್ ಪೌಂಡೇಶನ್ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತೃತ್ವದಲ್ಲಿ ತಾಲೂಕಿನ ಚಬನೂರ ಗ್ರಾಮದ ಶ್ರೀ ಅಮೋಘ ಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕೀತ್ಸಾ ಶಿಬಿರದಲ್ಲಿ ಆಯ್ಕೆಯಾದ ಎಲ್ಲ ಫಲಾನುಭವಿಗಳಿಗೆ ಯಶಸ್ವಿಯಾಗಿ ಶಸ್ತ್ರ ಚಿಕೀತ್ಸೆ ಮಾಡಲಾಗಿದೆ.
ವಿಜಯಪುರದ ಅನುಗ್ರಹ ಆಸ್ಪತ್ರೆಯ ಖ್ಯಾತ ನೇತ್ರ ತಜ್ಞ ವೈಧ್ಯರಾದ ಡಾ.ಪ್ರಭುಗೌಡ ಲಿಂಗದಳ್ಳಿ ಅವರು ತಮ್ಮ ಆಸ್ಪತ್ರೆಯ ತಂಡದೊಂದಿಗೆ ಚಬನೂರ ಗ್ರಾಮದಲ್ಲಿ ನಡೆಸಿದ ಶಿಬಿರದಲ್ಲಿ ಯಾದಗಿರಿ, ಕಲ್ಬುರ್ಗಿ, ಬಾಗಲಕೋಟ ಅಲ್ಲದೇ ವಿಜಯಪುರ ಜಿಲ್ಲೆಗಳಿಂದ ಸುಮಾರು 2500ಕ್ಕೂ ಅಧಿಕ ಜನರು ಆಗಮಿಸಿ ನೇತ್ರ ತಪಾಸಣೆ ಮಾಡಿಸಿಕೊಂಡಿದ್ದರು ಅದರಲ್ಲಿ 468ಜನರನ್ನು ಉಚಿತ ಕಣ್ಣಿನ ಶಸ್ತ್ರ ಚಿಕೀತ್ಸೆಗೆ ಆಯ್ಕೆ ಮಾಡಲಾಗಿತ್ತು ಅದರಂತೆ ಸದ್ಯ ನಿತ್ಯ 40 ಜನರಂತೆ 468ಜನರಿಗೆ ಯಶಸ್ವಿಯಾಗಿ ಶಸ್ತ್ರ ಚಿಕೀತ್ಸೆ ಮಾಡಿ ತಾಳಿಕೋಟೆಯಲ್ಲಿರುವ ಅನುಗ್ರಹ ಕಣ್ಣಿನ ಆಸ್ಪತ್ರೆಗೆ ಕರೆತರುವದರೊಂದಿಗೆ ಉಚಿತವಾಗಿ ಔಷಧ ಉಪಚಾರವನ್ನು ನೀಡಿ ಕಳುಹಿಸಲಾಯಿತು.
ವಿಜಯಪುರ, ಬಾಗಲಕೋಟ, ಕಲ್ಬುರ್ಗಿ ಜಿಲ್ಲೆ ಒಳಗೊಂಡು ಈಗಾಗಲೇ ಲಕ್ಷಾಂತರ ಜನರಿಗೆ ಉಚಿತವಾಗಿ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕೀತ್ಸೆ ನಡೆಸಿ ಹೆಗ್ಗಳಿಕೆಗೆ ಪಾತ್ರವಾಗಿರುವ ಅನುಗ್ರಹ ಆಸ್ಪತ್ರೆಯ ನೇತ್ರ ತಜ್ಞವೈಧ್ಯರಾಗಿರುವ ಡಾ.ಪ್ರಭುಗೌಡ ಲಿಂಗದಳ್ಳಿ ಅವರು ಸತತ 8ವರ್ಷಗಳಿಂದಲೂ ತಾಳಿಕೋಟೆ ತಾಲೂಕಿನ ಚಬನೂರ ಗ್ರಾಮದ ಶ್ರೀ ಅಮೋಘ ಸಿದ್ದೇಶ್ವರ ಜಾತ್ರೋತ್ಸವದಲ್ಲಿ ಈ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕೀತ್ಸಾ ಶಿಬಿರವನ್ನು ನಡೆಸುತ್ತಾ ಬಂದಿದ್ದಾರೆ.
ಈ ಉಚಿತವಾದ ಶಿಬಿರಗಳ ಮೂಲಕ ಬಡಬಗ್ಗರಿಗೆ ಅನುಕೂಲ ಕಲ್ಪಿಸುತ್ತಾ ಸಾಗಿರುವ ಡಾ.ಪ್ರಭುಗೌಡ ಲಿಂಗದಳ್ಳಿ ಅವರ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದು ಈ ಶಿಬಿರದ ಉಸ್ತುವಾರಿಯನ್ನು ಆಸ್ಪತ್ರೆಯ ಡಾ.ಶ್ರೀಮತಿ ಮಾಲಿನಿ ಪ್ರಭುಗೌಡ, ಮತ್ತು ಸಿಬ್ಬಂದಿಗಳಾದ ಮಲ್ಲನಗೌಡ ಬಿರಾದಾರ, ಮಹಾಂತೇಶ ಹುಜರತಿ, ಮುಕ್ತದೀರ ಜಮಾದಾರ, ರೇಣುಕಾ ಗಡೇದ, ಶೋಭಾ ಬೇನಾಳ, ಶಿವರಾಜ ಕಲಕೇರಿ ವಹಿಸಿಕೊಂಡಿದ್ದರು.