ವಿದ್ಯುತ್ ಸ್ಪರ್ಶ —  ಯುವಕ ಸಾವು.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ.14 :- ಪಂಪ್ ಸೆಟ್ ಗೆ ಅಳವಡಿಸಲಾಗಿದ್ದ ವಿದ್ಯುತ್ ಸಂಪರ್ಕದ ವೈಯರ್ ಕಟ್ ಆಗಿದ್ದನ್ನು ಸರಿಪಡಿಸುತ್ತಿರುವ ಯುವಕನಿಗೆ  ಆಕಸ್ಮಿಕ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ  ಗುರುವಾರ ಮಧ್ಯಾಹ್ನ  ತಾಲೂಕಿನ ಮಾಕನಡುಕು ಗ್ರಾಮದ ಹೊರವಲಯದಲ್ಲಿ ಜರುಗಿದೆ.
ಕೂಡ್ಲಿಗಿ ತಾಲೂಕಿನ  ಬೆಳಗಟ್ಟ ಗ್ರಾಮದ ನಾಗರಾಜ(28) ವಿದ್ಯುತ್ ಸ್ಪರ್ಶದಿಂದ  ಮೃತಪಟ್ಟ ದುರ್ದೈವಿ ಯುವಕನಾಗಿದ್ದಾನೆ ಈತನು   ಗುರುವಾರ ಮಧ್ಯಾಹ್ನ ತಮ್ಮ  ಜಮೀನಿಗೆ ಹೋಗಿ ಅಲ್ಲಿನ   ಪಂಪ್ ಸೆಟ್ ಗೆ ಕಲ್ಪಿಸಲಾಗಿದ್ದ  ವಿದ್ಯುತ್ ಸಂಪರ್ಕದಲ್ಲಿ ಜಮೀನು  ಕೆಲಸ ಮಾಡುವಾಗ ವೈಯರ್ ಕಟ್ ಅಗಿರುವುದನ್ನು ಗಮನಿಸಿ ಅಲ್ಲೇ ಇದ್ದ   ಕಟಿಂಗ್ ಪ್ಲೇಯರ್ ನಿಂದ ದುರಸ್ತಿ ಮಾಡುವಾಗ ಅಕಸ್ಮಿಕವಾಗಿ ತಗುಲಿದ  ವಿದ್ಯುತ್ ಸ್ಪರ್ಶದಿಂದ ಯುವಕ ನಾಗರಾಜ ಘಟನಾ  ಸ್ಥಳದಲ್ಲೇ  ಮೃತಪಟ್ಟಿದ್ದಾನೆ.
ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಹೊಸಹಳ್ಳಿ ಪೊಲೀಸ್ ಠಾಣೆಯ  ಆಪರಾಧ ವಿಭಾಗದ ಪಿಎಸೈ ನಾಗರತ್ನ, ಚಿಕ್ಕಜೋಗಿಹಳ್ಳಿ ಜೆಸ್ಕಾಂ ಜೆ.ಇ. ಆನಂದ ಭೇಟಿ ನೀಡಿದ್ದಾರೆ.  ಮೃತನ ತಂದೆ ಶರಣಪ್ಪ ನೀಡಿದ ದೂರಿನಂತೆ ಕಾನಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.