ಸರ್ಕಾರಿ ಜಮೀನು ಒತ್ತುವರಿ, ತೆರವು
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ.14 :-  ಸರಕಾರಿ ಉದ್ದೇಶಕ್ಜಾಗಿ ಮೀಸಲಿದ್ದ ಜಮೀನನ್ನು ವ್ಯಕ್ತಿಯೊರ್ವ  ಒತ್ತುವರಿ ಮಾಡಿದ್ದನ್ನು ಗಮನಿಸಿ ಘಟನಾ ಸ್ಥಳಕ್ಕೆ ಧಾವಿಸಿದ ಕೂಡ್ಲಿಗಿ  ತಹಸೀಲ್ದಾರ್ ಎಂ.ರೇಣುಕಾ ನೇತೃತ್ವದಲ್ಲಿ ಅಧಿಕಾರಿಗಳು ಸೇರಿ ಗುರುವಾರ ತೆರವುಗೊಳಿಸಿದ ಘಟನೆ ತಾಲೂಕಿನ ಮಾಕನಡುಕು  ಗ್ರಾಮದ ಬಳಿ ಜರುಗಿತು.
ಮಾಕನಡುಕು ಗ್ರಾಮದ ಸರ್ವೆ ನಂಬರ್  358/ ಸಿ ಹೊಂದಿರುವ 2.28 ಎಕರೆ ವಿಸ್ತೀರ್ಣದ ಜಮೀನು ಸರ್ಕಾರದ ಅನಾಧೀನವಾಗಿದ್ದು, ಈ ಜಾಗವನ್ನು ಸರಕಾರದ ಉದ್ದೇಶಕ್ಕಾಗಿ ಮೀಸಲಿಡಲಾಗಿತ್ತು. ಆದರೆ, ಚಿಕ್ಕಜೋಗಿಹಳ್ಳಿ ತಾಂಡಾದ ದಿವಾಕರ ನಾಯ್ಕ ಎನ್ನುವವರು ಈ ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿ ಬಿತ್ತನೆ ಮಾಡಿದ್ದರು. ಈ ವಿಷಯ ತಿಳಿದ ತಹಸೀಲ್ದಾರ್ ಎಂ.ರೇಣುಕಾ ಅವರು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ರೈತ ಒತ್ತುವರಿ ಮಾಡಿದ್ದನ್ನು ತೆರವುಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಗುಡೇಕೋಟೆ ನಾಡ ಕಚೇರಿಯ ಉಪ ತಹಸೀಲ್ದಾರ್ ಕೊಟ್ರಮ್ಮ, ಕಂದಾಯ ನಿರೀಕ್ಷಕ ಮುರಳಿಕೃಷ್ಣ, ಗ್ರಾಮ ಆಡಳಿತ ಅಧಿಕಾರಿ ಮರುಳಸಿದ್ದಪ್ಪ ಸೇರಿ ಗ್ರಾಮಸ್ಥರು ಇದ್ದರು.