ರಕ್ತದಾನಿಗಳ ದಿನಾಚರಣೆಯ ಜಾಥಾ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.14: ನಗರದಲ್ಲಿ ಇಂದು  ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ  ಹಾಗೂ  ಸರಳಾದೇವಿ  ಕಾಲೇಜಿನಿಂದ ವಿಶ್ವ ರಕ್ತಧಾನಿಗಳ  ದಿನಾಚರಣೆ ಅಂಗವಾಗಿ  ಜಾಥಾ  ಹಮ್ಮಿಕೊಳ್ಳಲಾಗಿತ್ತು.
ರಕ್ತದಾನದ ಬಗ್ಗೆ  ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲು ಘೋಷಣೆ ಕೂಗುತ್ತಾ ಜಾಥಾ ಸಾಗಿತು.
ಜಾಥಾದಲ್ಲಿ  ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು, ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಗೂ ಕಲ್ಯಾಣ ಕರ್ನಾಟಕ ಮಾಜಿ ಅರೇ ಸೇನೆ ಸಂಘದ ಪ್ರಧಾನ ಕಾರ್ಯದರ್ಶಿ ಬಿ ಎನ್ ಪ್ರಹ್ಲಾದ ರೆಡ್ಡಿ ಮತ್ತು ಸಹ ಕಾರ್ಯದರ್ಶಿ ರಾಜಸಿಂಹ ನಿರ್ದೇಶಕರಾದ ಲಕ್ಷ್ಮಣ್ ಮತ್ತು ಶೇಕ್ ಸಾಬ್ ಇವರುಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿಮ್ಮ ಜೀವದಾನದ ಕೊಡುಗೆ ಅತ್ಯಮೂಲ್ಯವಾದದ್ದು ದಾನಗಳಲ್ಲಿ ಶ್ರೇಷ್ಠವಾದದ್ದು ರಕ್ತದಾನ ಮತ್ತು ಅನ್ನದಾನ ಹಾಗೂ ನಿಮ್ಮ ರಕ್ತದಾನದಿಂದ ಬೇರೊಬ್ಬರಿಗೆ ಜೀವದಾನ ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು