ಮಹೇಶ್‍ಗೆ ಪಿಹೆಚ್‍ಡಿ ಪದವಿ ಪ್ರದಾನ
ಸಂಜೆವಾಣಿ ವಾರ್ತೆ
ಚಾಮರಾಜನಗರ ಜೂ13. ತಾಲೂಕಿನ ಬಾಗಳಿ ಗ್ರಾಮದ ಲಿಂಗನಾಯ್ಕ ಅವರ ಪುತ್ರ ಮಹೇಶ್ ಎನ್, ಅವರು ರಚಿಸಿರುವ ಮಹಾ ಪ್ರಬಂಧಕ್ಕೆ ಮೈಸೂರು ವಿಶ್ವ ವಿದ್ಯಾಲಯ ಪಿಹೆಚ್‍ಡಿ ಪದವಿಯನ್ನು ಪ್ರದಾನ ಮಾಡಿದೆ.
ಸಿಂಡೀಕೇಟ್‍ನಿಂದ ಕುಲಪತಿಗಳಿಗೆ ದತ್ತವಾದ ಅಧಿಕಾರಕ್ಕೆ ಅನುಗುಣವಾಗಿ ಮತ್ತು ಪರೀಕ್ಷಾ ಮಂಡಳಿಯ ಶಿಫಾರಸಿನ ಮೇರೆಗೆ ಡಾ. ಎಚ್.ಎಸ್. ಯತಿರಾಜ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಮಹೇಶ್ ಅವರು ಸಾದರ ಪಡಿಸಿದ ಸ್ಟಕ್ಚರಲ್ ಇನ್‍ಸೈಟ್ ಇನ್‍ಟೂ ನೈಟ್ರೋಜನ್ ಕಂಟೈನಿಂಗ್ ಹೆಟೆರೂಸೈಕ್ಲಿಕ್ ಕಾಂಪೌಂಡ್ಸ್ ಬೈ ಎಕ್ಸ್‍ರೇ ಕ್ರೈಸ್ಟಾಲೊಗ್ರಾಫಿಕ್ ಮೆತೆಡ್ ಎಂಬ ಮಹಾ ಪ್ರಬಂಧವನ್ನು ರಸಾಯನಶಾಸ್ತ್ರ ವಿಷಯದಲ್ಲಿ ಪಿಹೆಚ್‍ಡಿ ಪದವಿಗಾಗಿ 2017 ಮೈಸೂರು ವಿಶ್ವ ವಿದ್ಯಾಲಯದ ಪಿಹೆಚ್‍ಡಿ ನಿಯಮಾವಳಿಯಡಿಯಲ್ಲಿ ಅಂಗೀಕರಿಸಲಾಗಿದೆ. ಮತ್ತು ಅಭ್ಯರ್ಥಿಯು ಆಂಗ್ಲ ಭಾಷೆಯಲ್ಲಿ ಸಿದ್ದಪಡಿಸಿರುತ್ತಾರೆ, ಹೀಗಾಗಿ ಮಹೇಶ್ ಎನ್, ಅವರಿಗೆ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗಿದೆ ಎಂದು ಕುಲಸಚಿವ (ಪರೀಕ್ಷಾಂಗ) ಡಾ. ಬಸಪ್ಪ ತಿಳಿಸಿದ್ದಾರೆ.