ಶಾಸಕ ಸ್ಥಾನಕ್ಕೆ ತುಕರಾಂ ರಾಜೀನಾಮೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.14: ಜಿಲ್ಲೆಯ ಸಂಡೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಇ.ತುಕರಾಂ ಅವರು ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಕಾಂಗ್ರೆಸ್ ಪಕ್ಷದಿಂದಲೇ ಆಯ್ಕೆಯಾಗಿದ್ದರಿಂದ ಅವರು ನಡೆಯಲಿರುವ ಸಂಸತ್ ಅಧಿವೇಶನದಲ್ಲಿ ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಬೇಕಾಗಿರುವುದರಿಂದ ಅದಕ್ಕೂ ಮುನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ದೆಹಲಿಯಿಂದ ಇಂದು ಬೆಂಗಳೂರಿಗೆ ಆಗಮಿಸಿದ ತುಕರಾಂ ಅವರು ವಿಧಾನಸಭೆಯ ಸ್ಪೀಕರ್ ಲಭ್ಯವಿಲ್ಲದ ಕಾರಣ, ಅವರ ಅನುಮತಿ‌ ಪಡೆದು ಕಾರ್ಯದರ್ಶಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಸಂಜೆ ಸಂಡೂರಿಗೆ ಆಗಮಿಸಲಿದ್ದಾರೆ.
ಸಂಡೂರು ಕ್ಷೇತ್ರಕ್ಕೆ 2008, 2013, 2019 ಮತ್ತು 2023 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಸತತವಾಗಿ ಕಾಂಗ್ರೆಸ್ ಪಕ್ಷದಿಂದಲೇ ಶಾಸಕರಾಗಿ ಆಯ್ಕೆಯಾಗಿದ್ದರು.
ಎಂ.ಕಾಂ.ಪದವೀಧರರಾದ ತುಕರಾಂ ಅವರು ವಿಎಸ್ ಲಾಡ್  ಕಂಪನಿಯಲ್ಲಿ ನೌಕರರಾಗಿದ್ದರು.