ವಿದ್ಯುತ್ ಪ್ರವಹಿಸಿ ಮಹಿಳೆ ಸಾವು
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ:ಜೂ.14 :- ಮನೆಯ ಹಿಂಭಾಗದಲ್ಲಿದ್ದ ಬೋರ್ವೆಲ್ ಸ್ವಿಚ್ ಹಾಕಲು ಹೋಗಿ ವಿದ್ಯುತ್ ಪ್ರವಹಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ತಾಲೂಕಿನ ಹಬಟೂರು ಕೆಂಪೇಗೌಡನ ಕೊಪ್ಪಲು ಗ್ರಾಮದ ಎಚ್.ಎಸ್.ಕೃಷ್ಣೆಗೌಡರ ಪತ್ನಿ ಕೆ.ಗಾಯತ್ರಿ(56) ಮೃತ ಮಹಿಳೆ. ಗುರುವಾರ ಬೆಳಗ್ಗೆ 10 ಗಂಟೆ ಸಮಯದಲ್ಲಿ ಮನೆಗೆ ನೀರು ಪಡೆಯಲು ಮನೆಯ ಹಿಂಭಾಗದಲ್ಲಿದ್ದ ಬೋರ್ವೆಲ್ ನ ಸ್ಟಾರ್ಟರ್ ಬಾಕ್ಸ್ ಸ್ವಿಚ್ ಹಾಕಲು ಮುಂದಾದಾಗ ಏಕಾಏಕಿ ವಿದ್ಯುತ್ ಪ್ರವಹಿಸಿ ಗಾಯತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮನೆಯ ಹಿಂಭಾಗದ ಜಮೀನಿಗೆ ತೆರಳಿದ್ದ ಮೃತರ ಪತಿ ಕೃಷ್ಣೆಗೌಡ ಸ್ಥಳಕ್ಕೆ ಬಂದು ಗಮನಿಸಿದಾಗ ಸ್ಟಾರ್ಟರ್ ಬಾಕ್ಸ್ ಬಳಿ ಗಾಯತ್ರಿ ಬಿದ್ದಿರುವುದನ್ನು ನೋಡಿ ಕೂಡಲೇ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ ಅಷ್ಟರಲ್ಲಿ ಮಹಿಳೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಸಂಬಂಧ ಪಿರಿಯಾಪಟ್ಟಣ ಪೆÇಲೀಸ್ ಠಾಣೆಯಲ್ಲಿ ಮೃತರ ಮಗ ಸಾಗರ್ ದೂರು ನೀಡಿದ್ದು ಶವವನ್ನು ಮರಣೋತ್ತರ ಪರೀಕ್ಷೆ ಮೃತರ ವಾರಸುದಾರರಿಗೆ ನೀಡಲಾಯಿತು. ಗುರುವಾರ ಸಂಜೆ ಮೃತರ ಅಂತ್ಯಕ್ರಿಯೆಯನ್ನು ಗ್ರಾಮದಲ್ಲಿ ನೆರೆವೇರಿಸಲಾಯಿತು.