ಚುನಾವಣೆಯ ನಂತರ ಸರ್ಕಾರಿ ವಿಜ್ಞಾನದ ಕಾಲೇಜಿನ ದುಸ್ಥಿತಿ ಸರಿಪಡಿಸಲು ಮನವಿ.
ಸಂಜೆವಾಣಿ ವಾರ್ತೆ
ಚಿತ್ರದುರ್ಗ. ಜೂ.೧೩; ಸರ್ಕಾರಿ ವಿಜ್ಞಾನ ಕಾಲೇಜಿನ ಕಟ್ಟಡವನ್ನು ಮತಯಂತ್ರಗಳ ಸಂಗ್ರಹಣೆಗೆ ಬಳಸಿಕೊಂಡ ನಂತರ, ಕಟ್ಟಡಕ್ಕಾಗಿರುವ ಹಾನಿಯನ್ನ, ಶೀಘ್ರವಾಗಿ ಸರಿಪಡಿಸಿ, ಕಾಲೇಜಿನ ಆವರಣದಲ್ಲಿ ಮತ್ತು ಸುತ್ತಮುತ್ತ ಮೈದಾನದಲ್ಲಿ ಬಿಸಾಡಿ ಹೋಗಿರುವ ಊಟದ ತಟ್ಟೆಗಳನ್ನ, ಸ್ವಚ್ಛಗೊಳಿಸಿ, ವಿದ್ಯಾರ್ಥಿಗಳಿಗೆ ಮಾದರಿ ಜಿಲ್ಲಾಡಳಿತ ಆಗಲಿ ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿಯ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ ವಿನಂತಿಸಿಕೊAಡಿದ್ದಾರೆ.ಸರ್ಕಾರಿ ಕೆಲಸಗಳು ಎಂದರೆ ಅರ್ಧಂಬರ್ಧ ಎನ್ನುವ ಭಾವನೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೂಡುತ್ತಿದೆ, ಚುನಾವಣೆಗೆ ಕಟ್ಟಡ ಪಡೆಯುವಾಗ ತೋರಿದಂತಹ ಉತ್ಸಾಹವನ್ನು, ಚುನಾವಣೆ ಮುಗಿದ ನಂತರ, ಕಟ್ಟಡ ಬಿಟ್ಟು ಕೊಡುವಾಗ, ಅದೇ ಉತ್ಸಾಹವನ್ನು ತೋರಿಸಿ, ಚಟಪಟ್ ಎನ್ನುವಂತೆ ಕಾಲೇಜಿಗೆ ಆಗಿರುವ ಹಾನಿಯನ್ನ ಬೇಗ ಬೇಗ, ಸಿಮೆಂಟ್‌ನಿAದ ಸರಿಪಡಿಸಿ, ಬಣ್ಣ ಹೊಡೆಸಿ, ಕಾಲೇಜಿನ ಆವರಣ ತುಂಬಾ ಬಿಸಾಡಿರುವಂತಹ ಪ್ಲಾಸ್ಟಿಕ್ ತಟ್ಟೆ ಎಲೆಗಳು, ನೀರಿನ ಬಾಟಲ್‌ಗಳು, ಊಟದ ಎಲೆಗಳನ್ನು ನಗರಸಭೆ ವಾಹನದಲ್ಲಿ ಬೇಗ ಸ್ಥಳಾಂತರಿಸಿ, ಪೂರ್ತಿ ಕಾಲೇಜಿನ ಆವರಣವನ್ನು, ಒಳಾಂಗಣವನ್ನ, ಶುಭ್ರಗೊಳಿಸಿ ಹೋದರೆ, ಕಾಲೇಜಿನ ವಿದ್ಯಾರ್ಥಿಗಳು, ಚುನಾವಣೆಗೋಸ್ಕರ ತಮ್ಮ ಭವಿಷ್ಯವನ್ನೇ ತ್ಯಾಗ ಮಾಡಿದ್ದಾದರೂ ಉಪಯೋಗಕ್ಕೆ ಬರುತ್ತದೆ ಎಂದಿದ್ದಾರೆ.