ಮಾರ್ಟಳ್ಳಿ ಸಂತ ಅಂತೋನಿಯವರ ವಾರ್ಷಿಕ ಹಬ್ಬ
ಸಂಜೆವಾಣಿ ವಾರ್ತೆ
ಹನೂರು ಜೂ 14 :- ತಾಲ್ಲೂಕಿನ ಮಾರ್ಟಳ್ಳಿ ಪಾಲಿಮೇಡು ಗ್ರಾಮದಲ್ಲಿ ಸಂತ ಅಂತೋನಿಯವರ ವಾರ್ಷಿಕ ಹಬ್ಬದ ಆಚರಣೆ ಕಾರ್ಯಕ್ರಮ ಕ್ರೈಸ್ತ ಸಾಂಪ್ರದಾಯಿಕ ಧಾರ್ಮಿಕ ಆಚರಣೆಯಂತೆ ನೇರವೇರಿಸಿದರು.
ಸಂತ ಅಂತೋಣಿಯವರ ವಾರ್ಷಿಕ ಹಬ್ಬದ ಅಂಗವಾಗಿ ಬುಧವಾರ ಸಂಜೆ ಧ್ವಜಾರೋಹನ ಮಾಡಿ ದಿವ್ಯ ಬಲಿಪೂಜೆ ಫಾದರ್ ಕ್ರಿಸ್ಟೋಫರ್ ಕ್ಲಾರೆಟ್ ಹಾಗೂ ಇನ್ನಿತರ ಗುರುಗಳಿಂದ ನೆರವೇರಿಸಲಾಯಿತು.
ಗುರುವಾರ ಹಬ್ಬದ ದಿನ ಬೆಳಿಗ್ಗೆ 11 ಗಂಟೆಗೆ ಗುರುಗಳಿಂದ ದಿವ್ಯ ಬಲಿಪೂಜೆ ನೆರವೇರಿಸಲಾಯಿತು. ನಂತರ ಭವ್ಯ ತೇರಿನ ಮೆರವಣಿಗೆ ಮಾಡುವ ಮೂಲಕ ಕ್ರೈಸ್ತರು ಸಂಭ್ರಮಿಸಿದರು.
ಈ ವೇಳೆ ಭಕ್ತಾದಿಗಳು ಪ್ರಾರ್ಥನೆ ಹಾಗೂ ಸ್ತುತಿಗೀತೆಗಳನ್ನು ಹಾಡಿದರು.ನಂತರ ಬಂದಿದ್ದ ಎಲ್ಲಾ ಭಕ್ತಾದಿಗಳಿಗೂ ಊಟದ ವ್ಯವಸ್ಥೆ ಮಾಡಲಾಯಿತು.ಈ ಸಂದರ್ಭದಲ್ಲಿ ಧರ್ಮಕೇಂದ್ರದ ಗುರುಗಳಾದ ಫಾದರ್ ಸಂತಿಯಾಗು, ಫಾದರ್ ಸಿಲುವೈನಾಥನ್, ಫಾ.ಪ್ರಕಾಶ್ ಹಾಗೂ ಇನ್ನಿತರ ಗುರುಗಳು ಉಪಸ್ಥಿತರಿದ್ದರು.