ಜೂ 17 ಕ್ಕೆ “ಸ್ವರಾಭರಣ” ಸ್ಥಳೀಯ ಕವಿಗಳ ಪದ್ಯಗಾಯನ ಸಮಾರೋಪ

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೧೩: ಕರ್ನಾಟಕ ಸುಗಮ ಸಂಗೀತ ಪರಿಷತ್, ಅನುಶ್ರೀ ಸಂಗೀತಶಾಲೆ ಹಾಗೂ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜೂನ್ 17 ರ  ಸಂಜೆ 5 ಗಂಟೆಗೆ ದಾವಣಗೆರೆಯ ವಿದ್ಯಾನಗರ ರಸ್ತೆಯಲ್ಲಿರುವ ಕುವೆಂಪು ಕನ್ನಡ ಭವನದಲ್ಲಿ ಸ್ಥಳೀಯ ಕವಿಗಳ ಪದ್ಯಗಾಯನ “ಸ್ವರಾಭರಣ” ‘ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅನುಶ್ರೀ ಸಂಗೀತ ಶಾಲೆಯ ಸಂಸ್ಥಾಪಕಿ ವೀಣಾ ಸದಾನಂದ ಹೆಗಡೆ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಕಾರ್ಯಾಧ್ಯಕ್ಷರು, ಖ್ಯಾತ ಗಾಯಕರಾದ ಬೆಂಗಳೂರಿನ ಡಾ. ಕಿಕ್ಕೇರಿ ಕೃಷ್ಣಮೂರ್ತಿ ವಹಿಸಿಕೊಳ್ಳಲಿದ್ದಾರೆ.  ಅನುಶ್ರೀ ಸಂಗೀತಶಾಲೆಯ ಸಂಸ್ಥಾಪಕರಾದ ವಿದುಷಿ ಶ್ರೀಮತಿ ವೀಣಾ ಸದಾನಂದ ಹೆಗಡೆಯವರು ಸ್ಥಳೀಯ ಕವಿ, ಕವಯತ್ರಿಯರ ಕವನಗಳಿಗೆ ರಾಗ ಸಂಯೋಜಿಸಿ, ಪಾಡಿ “ಸ್ವರಾಭರಣ”ದ ಪ್ರಸ್ತುತಿ ವ್ಯಕ್ತಪಡಿಸಲಿದ್ದಾರೆ ಎಂದರು.ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ. ವಾಮದೇವಪ್ಪ, ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಬೆಂಗಳೂರಿನ ಪ್ರವೀಣ್ ಬಿ.ವಿ., ಖಜಾಂಚಿಯಾದ ಪ್ರಶಾಂತ ಉಡುಪ, ಪರಿಷತ್ತಿನ ಮೈಸೂರು ಜಿಲ್ಲಾಧ್ಯಕ್ಷರಾದ ನಾಗರಾಜ್ ವಿ.ಬೈರಿ, ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಶ್ರೀಮತಿ ಶಾಂತಾ ಎಸ್.ಶೆಟ್ಟಿ, ಮಂಡ್ಯ ಜಿಲ್ಲಾಧ್ಯಕ್ಷರಾದ ಡೇವೀಡ್ ಪ್ರತಿಭಾಂಜಲಿ ಆಗಮಿಸಲಿದ್ದಾರೆ ಎಂದು  ವ್ಯಕ್ತಪಡಿಸಿದರು.ಸಾಹಿತ್ಯ, ಸಂಗೀತಸಕ್ತರು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಹೊಸ ಪರಿಕಲ್ಪನೆಯ ಸಮಾರಂಭ ಯಶಸ್ವಿಗೊಳಿಸಬೇಕಾಗಿ  ವಿನಂತಿಸಿದರು.ಸುದ್ದಿಗೋಷ್ಠಿಯಲ್ಲಿ, ಪಿ.ಹೆಚ್. ಮಂಜುನಾಥ್, ಮಾಲತೇಶ್ ಕುಲಕರ್ಣಿ, ಸತ್ಯಭಾಮಾ ಮಂಜುನಾಥ್, ಕೆ.ಸಿ. ಉಮೇಶ್ ಉಪಸ್ಥಿತರಿದ್ದರು.