ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಕುರಿತು ಉಪನ್ಯಾಸ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೧೩; ದಾವಣಗೆರೆ ವಿಶ್ವವಿದ್ಯಾನಿಲಯ ಘಟಕ ಕಾಲೇಜು ತುರುವನೂರು ಪದವಿ ಕಾಲೇಜು ವತಿಯಿಂದ ಚಿತ್ರದುರ್ಗ ತಾಲ್ಲೂಕಿನ ಕೂನಬೇವು ಗ್ರಾಮದಲ್ಲಿ ನಡೆಯುತ್ತಿರುವ ಎನ್‍ಎಸ್‍ಎಸ್ ವಾರ್ಷಿಕ ಶಿಬಿರ ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ ಎನ್‍ಎಸ್‍ಎಸ್ ಅಧಿಕಾರಿ ಹಾಗೂ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಸ.ರಾ.ಲೇಪಾಕ್ಷ ಹಾಗೂ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಸಿ.ಸುರೇಶ್ ಅವರು ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ವಿಷಯದ ಕುರಿತು ಉಪನ್ಯಾಸ ನೀಡಿದರು.ತುರುವನೂರು ಪದವಿ ಕಾಲೇಜಿನ ಕನ್ನಡ ವಿಭಾಗದ ಬೋಧನಾ ಸಹಾಯಕ ಎಂ.ಅಶೋಕ್ ಕುಮಾರ್ ಅವರು, ಕೂನಬೇವು ಗ್ರಾಮದ ಹಳ್ಳಿಯ ಸ್ವಚ್ಚತೆ ಮತ್ತು ಶುಚಿತ್ವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಎನ್‍ಎಸ್‍ಎಸ್ ಶಿಬಿರದ ಸಂಯೋಜನಾಧಿಕಾರಿ ವಿ.ಕೆ.ಸಂತೋμï ಕುಮಾರ್, ಬೋಧನಾ ಸಹಾಯಕರಾದ ಕೆ.ಮಹೇಶ್, ಡಾ .ಕೆ.ಎನ್.ವಿಶ್ವನಾಥ್, ಬಿ.ಎನ್.ಶಿವಶಂಕರ್, ಅಧೀಕ್ಷಕ ಪಿ. ಮಂಜುನಾಥ ಹಾಗೂ ಬೋಧಕೇತರ ಸಿಬ್ಬಂದಿಯವರಾದ ಕೆ.ಸಿ.ಪ್ರದೀಪ್ ಕುಮಾರ್, ಎಂ.ಎಸ್.ಪವನ್ ಕುಮಾರ್, ಸಿ.ಧನಂಜಯ ಇದ್ದರು.
==========