೨.೫೦ ಲಕ್ಷ ರೂ. ಮೌಲ್ಯದ ಗಾಂಜಾ ವಶ

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಜೂ. ೧೩: ತೀರ್ಥಹಳ್ಳಿ ಪೊಲೀಸರು ಅಡಿಕೆ ತೋಟದ ಮೇಲೆ ದಾಳಿ ನಡೆಸಿ ಅಲ್ಲಿ ಬೆಳೆಯಲಾಗಿದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.ಮಂಗಳವಾರ  ಮಧ್ಯಾಹ್ನ ಹುತ್ತಳ್ಳಿ ಗ್ರಾಮದ ವಾಸಿ ಗುರುಮೂರ್ತಿ ಅವರ ಅಡಿಕೆ ತೋಟದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದಾನೆ ಎಂದು ಖಚಿತ ಮಾಹಿತಿಯೊಂದು ಪೊಲೀಸರಿಗೆ ಲಭ್ಯವಾಗಿತ್ತು.  ಈ ಹಿನ್ನೆಲೆಯಲ್ಲಿ ಡಿಎಸ್ಪಿ  ಗಜಾನನ ವಾಮನ ಸುತಾರ ನೇತೃತ್ವದ ಸಿಬ್ಬಂಧಿಗಳ ತಂಡ, ಮಾಹಿತಿ ಲಭ್ಯವಾದ ಸ್ಥಳಕ್ಕೆ ಹೋಗಿ ದಾಳಿ ನಡೆಸಿದೆ.ಅಡಿಕೆ ಗಿಡಗಳ ಮದ್ಯೆ ಬೆಳೆದಿದ್ದ ಅಂದಾಜು ಮೌಲ್ಯ ೨,೫೦,೦೦೦  ರೂಗಳ ೯ ಕೆಜಿ ೫೨೪ ಗ್ರಾಂ ತೂಕದ  ಒಟ್ಟು ೧೪ ಹಸಿ ಗಾಂಜಾ ಗಿಡಗಳನ್ನು  ಅಮಾನತ್ತು ಪಡಿಸಿಕೊಂಡು,  ಆರೋಪಿತನ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆ ಗುನ್ನೆ ಸಂಖ್ಯೆಃ ೦೧೪೮/೨೦೨೪  ಕಲಂ ೮ಅ, ೨೦ (ಚಿ) (i) ಓಆPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.