ಎಸ್ ಎಸ್ ಜನ್ಮದಿನ; ಗೋಶಾಲೆಯಲ್ಲಿ ಮೇವು ವಿತರಣೆ

ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೧೩; ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಶಾಮನೂರು ಶಿವಶಂಕ್ರಪ್ಪನವರ 94ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ  ನಗರದ  ಆವರಗೆರೆಯಲ್ಲಿರುವ ಗೋಶಾಲೆಯಲ್ಲಿ ಗೋವುಗಳಿಗೆ ಮೇವು ಮತ್ತು ಸೌತೆಕಾಯಿ ವಿತರಣೆ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕೆ ಶೆಟ್ಟಿಯವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತುಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಉತ್ತರ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಜಿ ಶಿವಕುಮಾರ್ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಯುಬ್ ಪೈಲ್ವಾನ್ ಡಿಸಿಸಿ ಕಾರ್ಯದರ್ಶಿಗಳಾದ ಎಸ್ ಮಲ್ಲಿಕಾರ್ಜುನ್ ಮತ್ತು ದ್ರಾಕ್ಷಾಯಣಮ್ಮ ರಾಜೇಶ್ವರಿ, ಮಂಗಳಮ್ಮ, ಮಂಜಮ್ಮ, ಶುಭ ಮಂಗಳ ,ರಾಘವೇಂದ್ರ ಗೌಡ, ರಾಜು ಭಂಡಾರಿ, ವಿಜಯ ಕುಮಾರ್ ಜೈನ್, ಶ್ರೀಕಾಂತ್ ಬಗರೆ, ಯುವರಾಜ್, ಬಸವರಾಜ್ ರಾಕೇಶ್ ಡಿಸಿ ಇನ್ನು ಮುಂತಾದವರು ಇದ್ದರು.