ಕಟ್ಟಿಸಿದ್ದು ಶಿಕ್ಷಕರಿಗಾಗಿ, ಬಳಸಿದ್ದು ಚುನಾವಣೆಗಾಗಿ, ಇದು ಚಿತ್ರದುರ್ಗದ ಗುರುಭವನದ ಕಥೆ.
ದಾವಣಗೆರೆ. ಜೂ.೧೪; ಚಿತ್ರದುರ್ಗದ ಮಧ್ಯಭಾಗದಲ್ಲಿರುವ ಗುರುಭವನ, ಶಿಕ್ಷಕರ ಕಾರ್ಯ ಚಟುವಟಿಕೆಗಳಿಗಾಗಿ, ಮಕ್ಕಳ ಬೋಧನೆಗಾಗಿ, ಪಾಠ ಪ್ರವಚನಗಳ ಬಗ್ಗೆ ಮೀಟಿಂಗ್ ಮಾಡಲು. ಶಿಕ್ಷಕರಿಗೆ ಅನುಕೂಲವಾಗಲಿ ಎಂದು ಕಟ್ಟಿಸಿಕೊಂಡಿದ್ದು, ಇಂದು ಬಳಕೆಗೆ ಬಾರದೆ, ಧೂಳು ತುಂಬಿಕೊAಡು ಕೂತಿದೆ. ಇದನ್ನ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಮತ್ತೊಮ್ಮೆ ಇದಕ್ಕೆ ಸುಣ್ಣ ಬಣ್ಣ ಹೊಡಿಸಿ, ಕಿಟಕಿಗಳನ್ನ ತೆರೆದು, ಜಿಲ್ಲೆಯ ಶಿಕ್ಷಣದ ಕಾರ್ಯ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಿ ಎಂದು ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್.ಕೆ. ಎಸ್. ಸ್ವಾಮಿ ಅವರು ಶಿಕ್ಷಕರ ಪರವಾಗಿ ವಿನಂತಿಸಿಕೊAಡಿದ್ದಾರೆ.ಗುರುಭವನದ ಮುಖ್ಯ ಉದ್ದೇಶವೇ ಶಿಕ್ಷಕರಿಗೆ ಯಾವಾಗಲಾದರೂ ಬಂದು, ತಮ್ಮ ಕಾರ್ಯಕ್ರಮಗಳನ್ನ ನಡೆಸಿ, ಮಕ್ಕಳಿಗೆ ಅನುಕೂಲವಾಗುವಂತಹ ಪ್ರದರ್ಶನಗಳನ್ನ ಏರ್ಪಡಿಸುವುದು, ಸಭೆಗಳನ್ನು ಏರ್ಪಡಿಸುವುದು, ತುರ್ತು ಸಂದರ್ಭದಲ್ಲಿ ಸಭೆ ಸೇರಿಸಲು, ಯಾವಾಗಲೂ ಗುರುಭವನದ ಕೀಲಿ ಕೈ, ಶಿಕ್ಷಕ ಸಂಘದ ಜೊತೆ ಅಥವಾ ಶಿಕ್ಷಕರ ಜೊತೆ ಇರಬೇಕಾಗಿತ್ತು. ಆದರೆ ಈ ಗುರುಭವನವನ್ನು ಚುನಾವಣೆಗೋಸ್ಕರ ಬಳಸಿಕೊಂಡು, ಕಿಟಕಿ ಬಾಗಿಲುಗಳನ್ನೆಲ್ಲ ಇಟ್ಟಿಗೆ ಮತ್ತು ಸಿಮೆಂಟ್‌ನಿAದ ಮುಚ್ಚಿ ಹಾಕಿ, ಗೋಡೋನ್ ತರ ಮಾಡಿಕೊಂಡು, ಶಿಕ್ಷಕರಿಗೆ ಇವತ್ತು ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮ ಮಾಡಲು ಸಹ, ಸಭಾಂಗಣಗಳು ದೊರಕದಂತಾಗಿದೆ ಎಂದಿದ್ದಾರೆ.ಚುನಾವಣೆಗೂ ಶಿಕ್ಷಣ ಇಲಾಖೆಗೂ ಅವಿನಾಭಾವ ಸಂಬAಧವಿದೆ. ಚುನಾವಣೆಗಳನ್ನೆಲ್ಲಾ ನೆಡೆಸಿಕೊಡುವುದಿಲ್ಲಾ ಶಿಕ್ಷಕರೇ, ಹಾಗಂತ ಶಿಕ್ಷಕರ ಭವನಗಳನ್ನ, ಗುರುಭÀವನಗಳನ್ನ ಚುನಾವಣೆಗೆ, ಮತ ಯಂತ್ರಗಳನ್ನ ಸಂಗ್ರಹಿಸಿಡಲು, ಮತ ಎಣಿಕೆ ಮಾಡಿಕೊಳ್ಳಲು, ಸ್ಟಾçಂಗ್ ರೂಮ್ ಮಾಡಿ, ಅದನ್ನು ಗಾಳಿ ಆಡದಂತೆ, ಸೀಲ್ ಮಾಡುವುದರಿಂದ, ಆ ಸಭಾಂಗಣವನ್ನು ಮತ್ತೆ ಯಾವುದೇ ಚಟುವಟಿಕೆಗಳಿಗೆ ಬಳಸಲಾರದಂತಾಗುತ್ತದೆ. ಶಿಕ್ಷಕರೆಲ್ಲ ತಮ್ಮ ಸಂಬಳದಲ್ಲಿ ಸ್ವಲ್ಪ ಭಾಗವನ್ನು ಕೊಟ್ಟು, ಈ ಗುರುಭವನ ಕಟ್ಟಿಸಿಕೊಂಡಿದ್ದಾರೆ ಎಂದು ಒಬ್ಬ ಶಿಕ್ಷಕರು ದೂರಿದ್ದಾರೆ. ಇದು ನಿಜವೇ ಇರಬಹುದು ಎಂದಿದ್ದಾರೆ, ಶಿಕ್ಷಕರ ಉದ್ದೇಶ ಶಿಕ್ಷಕರಿಗೆ ದಿನದ 24 ಗಂಟೆ ಸಹ ಅವರಿಗೆ ಬೇಕಾದಾಗ, ಶಿಕ್ಷಣದ ಉದ್ದೇಶದಿಂದ, ಯಾವುದೇ ಕಾರ್ಯಕ್ರಮ ನಡೆಸಿಕೊಡಲು ಈ ಭವನವನ್ನು ಕಟ್ಟಿಸಿಕೊಂಡಿರುತ್ತಾರೆ. ಈಗ ಶಿಕ್ಷಕರಿಗೆ ಯಾವುದಾದರೂ ಕಾರ್ಯಕ್ರಮ ಮಾಡಬೇಕೆಂದರೆ, ಬಾಡಿಗೆ ಕೊಟ್ಟು, ಶಾಮೀಯ್ಯಾನ್ ಹಾಕಿಕೊಂಡು ಅಥವಾ ಯಾವುದಾದರೂ ಒಂದು ಬೇರೆ ಕಟ್ಟಡವನ್ನು ಹುಡುಕಿಕೊಂಡು ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅವರಿಗೆ ತಾ.ರಾ.ಸು ರಂಗ ಮಂದಿರ, ಅಥವಾ ಇನ್ಯಾವುದಾದರೂ ಒಂದು ಕಟ್ಟಡವನ್ನು ಉಚಿತವಾಗಿ ನೀಡದೆ, ಅವರ ವಶದಲ್ಲಿದ್ದ, ಅವರ ಆಡಳಿತಕ್ಕೆ ಎಂದು ನೀಡಿದಂತಹ, ಗುರುಭವನವನ್ನು ಜಿಲ್ಲಾಡಳಿತ ಕಿತ್ತುಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ ಎಂದರು.ಯಾವಾಗ ಗುರುಭವನ ಚುನಾವಣೆ ಗೋಸ್ಕರ, ಮತ ಯಂತ್ರಗಳನ್ನು ಸಂಗ್ರಹಣೆಗೋಸ್ಕರ, ಕಿಟಕಿ ಬಾಗಿಲಿಗಳನ್ನೆಲ್ಲ ಸೀಲ್ ಮಾಡಿಸಿಕೊಂಡಿತೋ, ಅವಾಗಿಂದ ಜಿಲ್ಲೆಯಲ್ಲಿ ಶಿಕ್ಷಕರಿಗೆ ಯಾವುದಾದರೂ ಒಂದು ಕಾರ್ಯಕ್ರಮ ಮಾಡದೇ, ವಿಜ್ಞಾನದ ಚಟುವಟಿಕೆಗಳನ್ನು ಸಹ ಮಾಡಲಾರದೆ, ಮಕ್ಕಳಿಗೆ ಯಾವುದಾದರೂ ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಮಾಡಲಾರದೆ, ಜಿಲ್ಲೆಯ ಮಕ್ಕಳ ಅಭಿವೃದ್ಧಿಯಲ್ಲಿ ಹಿಂಜರಿತವಾಗುತ್ತಿದೆ. ಮಕ್ಕಳಲ್ಲಿ ಶೈಕ್ಷಣಿಕ ಶೈಕ್ಷಣಿಕ ಅಭಿವೃದ್ಧಿ, ಸಾಂಸ್ಕöÈತಿಕ ಅಭಿವೃದ್ಧಿ, ವೈಜ್ಞಾನಿಕ ಮನೋಭಿವೃದ್ಧಿಗಳಿಲ್ಲದೆ ಜಿಲ್ಲೆ ಮೌನವಾಗಿ ಕುಗ್ಗಿ ಹೋಗಿದೆ ಎಂದರು.ಈಗಲಾದರೂ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆಗಳು, ಇದರ ಬಗ್ಗೆ ಯೋಚಿಸಿ, ಈ ಸಭಾಂಗಣಕ್ಕೆ ಸುಣ್ಣ-ಬಣ್ಣ, ಪೇಂಟ್ ಬಳಸಿ, ಕಿಟಕಿ ಬಾಗಿಲುಗಳನ್ನು ತೆರೆದು, ಗಾಳಿ ಆಡುವಂತೆ ಮಾಡಿ, ಒಳಗಡೆ ಇರುವ ಸಭಾಂಗಣವನ್ನು ಸುಂದರವಾಗಿ, ವ್ಯವಸ್ಥಿತವಾಗಿ, ಮಕ್ಕಳ ಚಟುವಟಿಕೆಗಳಿಗೆ, ಶಿಕ್ಷಕರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬೇಕೆಂದು ಪತ್ರಿಕೆಯ ಮುಖಾಂತರ ಡಾ. ಸ್ವಾಮಿಯವರು ವಿನಂತಿಸಿಕೊAಡಿದ್ದಾರೆ.