ಮೃತನ ಕುಟುಂಬಕ್ಕೆ ಹತ್ತು ಲಕ್ಷರೂ.ಗಳ ಪರಿಹಾರ ಮೊತ್ತದ ಚೆಕ್ ವಿತರಣೆ
ಕಲಬುರಗಿ:ಜೂ.13:ಚಲಿಸುತ್ತಿರುವ ಬಸ್ಸಿನಿಂದ ಆಯಾ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಲಕ್ಷ್ಮೀಪುತ್ರ ಇವರ (ಅವಲಂಬಿತರಾದ) ತಂದೆಯಾದ ಅಮೃತ ಬಸಣ್ಣ ಮಾಡ್ಯಾಳ ಇವರಿಗೆ 2024ರ ಮೇ 30 ರಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಂ. ರಾಚಪ್ಪ ಅವರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್ ನಿಂದ ಒಟ್ಟು 10 ಲಕ್ಷ ರೂ.ಗಳ ಪರಿಹಾರ ಮೊತ್ತದ ಚೆಕ್‍ನ್ನು ವಿತರಿಸಿದರು.