ನೊಂದಣಿ ಅಭಿಯಾನ ಕಾರ್ಯಾಗಾರ
ನವಲಗುಂದ,ಸೆ.25: 18 ರಿಂದ 60 ವಯಸ್ಸಿನ ಎಲ್ಲ ಅಸಂಘಟಿತ ಕಾರ್ಮಿಕರು ಕಡ್ಡಾಯವಾಗಿ ಕಾರ್ಮಿಕರ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡು ಸರ್ಕಾರದಿಂದ ಸಿಗುವಂತಹ ಸೌಲಭ್ಯ ಪಡೆಯಲು ಅರ್ಹರಾಗಬೇಕು ಎಂದು ಗವಿಮಠದ ಮನಿಪ್ರ ಬಸವಲಿಂಗ ಸ್ವಾಮೀಜಿ ನುಡಿದರು.
ಅವರು ಪಟ್ಟಣದ ದಾಸೋಹ ಭವನದಲ್ಲಿ ಕಾರ್ಮಿಕ ಇಲಾಖೆ ಇಲಾಖೆಯಿಂದ ಹಮ್ಮಿಕೊಂಡಿದ್ದ ಅಸಂಘಟಿತ ಕಾರ್ಮಿಕರ ನೋಂದಣಿ ಅಭಿಯಾನ ಕಾರ್ಯಾಗಾರದ ಸಾನಿಧ್ಯವಹಿಸಿ ಅಧಿಕಾರಿಗಳೊಂದಿಗೆ ಉದ್ಘಾಟಿಸಿ ಮಾತನಾಡಿದ ಅವರು ಕಾರ್ಮಿಕ ವರ್ಗದಲ್ಲಿ ಬರುವಂತಹ ಎಲ್ಲ ಕಾರ್ಮಿಕರು ಇಲಾಖೆಯ ಕಾರ್ಡ ಪಡೆದುಕೊಳ್ಳಿ ಎಂದು ಆಶೀರ್ವದಿಸಿದರು
.
ಹಿರಿಯ ಕಾರ್ಮಿಕ ನಿರೀಕ್ಷಿಕಿ ಸಂಗೀತಾ ಬೆನಕೊಪ್ಪ ಮಾತನಾಡಿ ಅಸಂಘಟಿತ ವಲಯದ ವ್ಯಾಪ್ತಿಯಲ್ಲಿ ಬರುವ 20 ವಿವಿಧ ಕಾರ್ಮಿಕರಿಗಲ್ಲದೆ ದಿನಪತ್ರಿಕೆ ವಿತರಿಸುವ ಕಾರ್ಮಿಕರು ಅರೆಕಾಲೀನ ವೃತ್ತಿ ನಿರ್ವಹಿಸುತ್ತಿದ್ದು ಬಹುತೇಕ ವಿತರಕರು ಪ್ರತಿನಿತ್ಯ ದ್ವಿಚಕ್ರ ವಾಹನಗಳನ್ನು ಬಳಸುತ್ತಿದ್ದು, ಅಪಘಾತಕ್ಕೊಳಗಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ. ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ವಿತರಿಸುವ ಮೂಲಕ ಸಾಮಾಜಿಕ ಭದ್ರತೆ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದರು.
ಹಿರಿಯ ಕಾರ್ಮಿಕ ನಿರೀಕ್ಷಕರಾದ ಅಕ್ರಮ ಅಲ್ಲಾಪುರ ಮಾತನಾಡಿ ಕೇಂದ್ರ ಸರ್ಕಾರದ ಇ-ಶ್ರಮ ಪೆÇೀರ್ಟಲ್‍ನಲ್ಲಿ ನ್ಯೂಸ್ ಪೇಪರ ಬಾಯ್ (” ಓeತಿs Pಚಿಠಿeಡಿ ಃoಥಿ”) ಎಂಬ ವರ್ಗದಡಿ ನೋಂದಣಿಯಾಗಿರಬೇಕು ಆದಾಯ ತೆರಿಗೆ ಪಾವತಿದಾರರಾಗಿರಬಾರದು ಇ.ಎಸ್.ಐ ಮತ್ತು ಇ.ಪಿ.ಎಫ್ ಸೌಲಭ್ಯ ಹೊಂದಿರಬಾರದು ಅಪಘಾತದಿಂದ ಮರ ಹೊಂದಿದಲ್ಲಿ ಒಂದು ಲಕ್ಷ ರೂ ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ಒಂದು ಲಕ್ಷ ರೂ (ಶೇಕಡಾವಾರು ದುರ್ಬಲತೆ ಆಧಾರದ ಮೇಲೆ) ಅಪಘಾತ ಅಥವಾ ಮಾರಣಾಂತಿಕ ಕಾಯಿಲೆ ಅಥವಾ ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ ಆಸ್ಪತ್ರೆ ವೆಚ್ಚ ಮರುಪಾವತಿ ಒಂದು ಲಕ್ಷ ರೂ ಗಳವರೆಗೆ ಸೌಲಭ್ಯಗಳು ದೊರಕಲಿವೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಎಂದರು.
\
ಮುಖ್ಯಅತಿಥಿಗಳಾದ ಎಸ್ ಎಂ ಪಟ್ಟಣಶೆಟ್ಟಿ, ಹಿರಿಯ ಕಾರ್ಮಿಕ ನಿರೀಕ್ಷಕಿ ರಜನಿ ಹಿರೇಮಠ, ತಾಲ್ಲೂಕಾ ಕಾರ್ಮಿಕ ಸಂಘದ ಅಧ್ಯಕ್ಷ ಲಕ್ಷ್ಮಣ ಗುಡಾರದ, ಅಬ್ದುಲರಝಾಕ ನದಾಫ, ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರೀಯಾಜ ನಾಸಿಪುಡಿ, ಯಲ್ಲಪ್ಪ ಭೋವಿ, ಧರ್ಮರಾಜ ಗುಳೇದ ಶಿವು ನಾಯ್ಕ, ಪರಶುರಾಮ ಹಡಪದ, ಸಿದ್ದು ಬಸಾಪುರ, ಖಾಜಾಸಾಬ. ಧಾರವಾಡ, ಪಕ್ಕೀರಪ್ಪ ಹಡಪದ ಬಸವರಾಜ ಹಡಪದ, ಅರ್ಜುನ ಹಡಪದ, ಬಾಬುಶಾ ಮಕಾಂದಾರ, ಬುಡ್ನಾಸಾಬ್ ನಾಸಿಪುಡಿ, ಬೀಬಿಜಾನ ಗುತ್ತಲ, ಮಹಾದೇವಿ ಹಡಪದ ಇತರರು ಇದ್ದರು