ಗೂಂಡಾ ಕಾಯ್ದೆ ಅಡಿ ಮಾರ್ಕೆಟ್ ಸತೀಶ್ ಬಂಧನ
ಕಲಬುರಗಿ,ಜೂ.13-ರಾಜ್ಯದ ವಿವಿಧ ಪೆÇಲೀಸ್ ಠಾಣೆ ಹಾಗೂ ಕಲಬುರಗಿ ನಗರದ ಹಲವು ಪೆÇಲೀಸ್ ಠಾಣೆಗಳಲ್ಲಿ ಸೇರಿದಂತೆ ಒಟ್ಟು 25 ಪ್ರಕರಣಗಳಲ್ಲಿ ಭಾಗಿಯಾಗಿರುವ ಕುಖ್ಯಾತ ರೌಡಿ ಸತೀಶ್ ಅಲಿಯಾಸ್ ಮಾರ್ಕೆಟ್ ಸತೀಶ್‍ನನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಬಳ್ಳಾರಿಯ ಕೇಂದ್ರ ಕಾರಗೃಹದಲ್ಲಿ ಬಂಧನದಲ್ಲಿಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಚೇತನ್ ಆರ್.ತಿಳಿಸಿದ್ದಾರೆ.
ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಮಾರ್ಕೆಟ್ ಸತೀಶ್‍ನನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.