ಕಲಬುರಗಿ: ನೆಲಕ್ಕುರುಳಿ ಬಿದ್ದ ಮದ್ಯದ ಲಾರಿ
ಕಲಬುರಗಿ,ಜೂ.13-ಕಾರಿಗೆ ಸೈಡ್ ಕೊಡಲು ಹೋಗಿ ಮದ್ಯದ ಲಾರಿಯೊಂದು ನೆಲಕ್ಕುರುಳಿ ಬಿದ್ದ ಘಟನೆ ಫರಹತಾಬಾದ್ ಪೆÇೀಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ ರಾಯಭಾಗನಿಂದ ಬೀದರ್‍ಗೆ ಎಮ್.ಸಿ.ವಿಸ್ಕಿ 110 ಬಾಕ್ಸ್ ತೆಗೆದುಕೊಂಡು ಹೋಗುತ್ತಿದ್ದಾಗ ಫರಹತಾಬಾದ್ ಬಳಿ ಕಾರಿಗೆ ಸೈಡ್ ಕೊಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ನೆಲಕ್ಕುರುಳಿ ಬಿದ್ದಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಫರಹತಾಬಾದ್ ಪೆÇೀಲಿಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.