ಬಿತ್ತನೆ ಬೀಜ ತರಲು ಹೋದಾಗ ದುರ್ಘಟನೆರಸ್ತೆ ಅಪಘಾತ: ಇಬ್ಬರು ರೈತರ ದುರ್ಮರಣ
ಅಫಜಲಪುರ,ಜೂ.13-ತಾಲೂಕಿನ ಬಡದಾಳ, ಬಳೂರ್ಗಿ ಮುಖ್ಯ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ಎರಡು ಟಿಪ್ಪರ್‍ವಾಹನಗಳು ಹಾಗೂ ಒಂದು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಮೃತರನ್ನು ಸೂರ್ಯಕಾಂತ ನಿಲಂಗಿ (55) ಹಾಗೂ ಅಲ್ಲಾವುದ್ದಿನ್ ಆವೇರಿ (60) ಎಂದು ಗುರುತಿಸಲಾಗಿದೆ. ಇಬ್ಬರು ಬಡದಾಳ ಗ್ರಾಮದ ರೈತರಾಗಿದ್ದು, ಅಫಜಲ್ಪುರ ಪಟ್ಟಣಕ್ಕೆ ತೆರಳಿ ಬಿತ್ತನೆ ಬೀಜಗಳನ್ನು ಖರೀದಿಸಿಕೊಂಡು ಮರಳಿ ಬಡದಾಳ ಗ್ರಾಮಕ್ಕೆ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಸೂರ್ಯಕಾಂತ ನಿಲಂಗಿ ಅವರಿಗೆ ಎರಡು ಗಂಡು ಮಕ್ಕಳು, ಒರ್ವ ಮಗಳಿದ್ದಾಳೆ. ಅಲ್ಲಾವುದ್ದಿನ್ ಆವೇರಿ ಅವರಿಗೆ ಒರ್ವ ಮಗ, ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಘಟನೆ ಸಂಬಂಧ ಅಫಜಲ್ಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪಿಎಸ್‍ಐ ಮಹಿಬೂಬ ಅಲಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.