ಗೋ ರಕ್ಷಣೆ ಮಾಡಲು ಹೋದವರಿಗೆ ಜೀವ ಬೆದರಿಕೆ
ಕಲಬುರಗಿ,ಜೂ.13-ಗೋ ರಕ್ಷಣೆ ಮಾಡಲು ಹೋದ ಹಿಂದೂ ಜಾಗೃತಿ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ ಅವರಿಗೆ ನಾಲ್ಕೈದು ಜನ ಅವಾಚ್ಯವಾಗಿ ಬೈಯ್ದು ಜೀವ ಬೆದರಿಕೆ ಹಾಕಿರುವ ಬಗ್ಗೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವಾದಿ ಅವರು ಆಳಂದ ಚೆಕ್‍ಪೋಸ್ಟ್‍ದಿಂದ ಚಿಂಚೋಳಿ ಕ್ರಾಸ್ ಹತ್ತಿರವಿರುವ ಗೆಳೆಯ ಮಹೇಶ್‍ನನ್ನು ಭೇಟಿಯಾಗಲು ಹೋಗುತ್ತಿದ್ದಾಗ ಆಳಂದ ಚೆಕ್ ಪೋಸ್ಟ್ ಹತ್ತಿರದ ಕಲ್ಯಾಣ ಮಂಟಪದ ಎದುರುಗಡೆ ಟಾಟಾ ಈಚರ್ ವಾಹನದಲ್ಲಿ ಹಸು ಮತ್ತು ಎಮ್ಮೆ ಸಾಗಿಸುತ್ತಿರುವುದನ್ನು ಕಂಡು ವಿಚಾರಿಸಿದ್ದಾರೆ. ಈ ವೇಳೆ ನಾಲ್ಕೈದು ಜನ ಅವರನ್ನು ಅವಾಚ್ಯವಾಗಿ ಬೈಯ್ದು ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿದಬಂದಿದೆ.
ಈ ಸಂಬಂಧ ಸ್ವಾದಿ ಅವರು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.