ಗುಡೆಮಾರನಹಳ್ಳಿ ಆದಿಶಕ್ತಿ ಪೀಠದಲ್ಲಿ ವಾರಿಕ ಗೆ ಪ್ರಶಸ್ತಿ ಪ್ರಧಾನ
ಕಲಬುರ್ಗಿ,ಜೂ,13:ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಗುಡೇಮಾರನಹಳ್ಳಿಯ ಆದಿ ಶಕ್ತಿ ಮಹೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಕಲಬುರಗಿ ಜಿಲ್ಲಾ ಸವಿತಾ ಸಮಾಜದ ನೂತನ ಜಿಲ್ಲಾಧ್ಯಕ್ಷ ಆನಂದ ವಾರಿಕ ಅವರಿಗೆ ಆದಿಶಕ್ತಿ ಮಹೇಶ್ವರಿ ಅಮ್ಮನವರ ಆರಾಧಕರಾದ ಮಾತೆ ಭವ್ಯಶ್ರಿ ಕುಲ ಬಾಂಧವರ ವೇದಿಕೆಯ ಲೋಕೇಶ್ ಮಂಡ್ಯ ಶಬರಿ ಜನಸೇವಾ ಟ್ರಸ್ಟ್ ನ ಶಬರೀಶ್ ತಲಕಾಡು ಅವರಿಂದ ನಿಸ್ವಾರ್ಥ ಸೇವಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು ಡಾ ಲಕ್ಷ್ಮೀ ಹೊಸಕೋಟೆ,ರಾಮಾಂಜಿನಪ್ಪ ಚಿಕ್ಕಬಳ್ಳಾಪುರ, ತ್ಯಾಗರಾಜ ರಾಮಾಪುರ,ಕೋಮಲಾ, ಜಯರಾಂ , ಶಿವರಾಜ್ ಮಂಡ್ಯ ರಾಜ್ಯದ ಎಲ್ಲಾ ಭಾಗಗಳ ಸವಿತಾ ಸಮಾಜದ ಮುಖಂಡರುಗಳು, ಸುಭಾಷ್ ಬಾದಾಮಿ ಮದನ ಗದವಾಲ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿದ್ಯಾಸಾಗರ ಹಾಬಾಳ, ಸಹ ಖಜಾಂಚಿ ಕಿರಣ್ ಕುಮಾರ್ ಚಿಕಲಿಕರ್ , ಅಂಬರೀಷ್ ಇಟಗಾ, ಸುಭಾನ್ ಪಟೇಲ್ ಮಲ್ಲು ನಾಯಕೋಡಿ ಉಪಸ್ಥಿತರಿದ್ದರು.