ವರ್ಣ ಚಿಲುಮೆ ನಾಳೆ ಬಿಡುಗಡೆ
ಕಲಬುರಗಿ: ಜೂ.13:ಚಿತ್ರಕಲಾ ಶಿಕ್ಷಕರ ಹಾಗೂ ಗೆಳಯರ ಬಳಗ ಹುಮನಾಬಾದ್ ಮತ್ತು ಹಿರೇಮಠ ಪರಿವಾರದಿಂದ ಜೂ.14ರಂದು ಸಂಜೆ 4ಕ್ಕೆ ಹುಮನಾಬಾದ್‍ನ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ವರ್ಣ ಚಿಲುಮೆ ಗ್ರಂಥ ಬಿಡುಗಡೆ ಹಾಗೂ ಅಶೋಕಕುಮಾರ ಹಿರೇಮಠರವರ ವಯೋನಿವೃತ್ತಿ ಪ್ರಯುಕ್ತ ಅಭಿನಂದನಾ ಸಮಾರಂಭ ನಡೆಯಲಿದೆ. ಹಾರಕೂಡ ಹಿರೇಮಠ ಸಂಸ್ಥಾನದ ಡಾ.ಚನ್ನವೀರ ಶಿವಾಚಾರ್ಯರು ಸಾನ್ನಿಧ್ಯವಹಿಸಲಿದ್ದಾರೆ. ರೇಣುಕ ಗಂಗಾಧರ ಶಿವಾಚಾರ್ಯರು ನೇತೃತ್ವ ವಹಿಸಲಿದ್ದಾರೆ. ಹುಮನಾಬಾದ್ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಉದ್ಘಾಟಕರಾಗಿ ಪಾಲ್ಗೊಳ್ಳಲಿದ್ದಾರೆ. ಕೆಎಎಸ್ ಅಧಿಕಾರಿ ಸಿದ್ದಲಿಂಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಎಂಎಲ್ಸಿ ಡಾ.ಚಂದ್ರಶೇಖರ ಪಾಟೀಲ್ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಲಿದ್ದಾರೆ. ಶಾಸಕ ಭೀಮರಾವ ಪಾಟೀಲ್ ಅವರು ವರ್ಣ ಚಿಲುಮೆ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಶಹಾಪುರ ಏಕದಂಡಗಿ ಮಠದ ಪೀಠಾಧಿಪತಿ ಅಜೇಂದ್ರ ಸ್ವಾಮಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಚನ್ನಬಸವಣ್ಣಾ ಲಂಗೋಟೆ ಐ.ಪಿ.ಎಸ್. ಪೆÇೀಲಿಸ್ ವರಿಷ್ಠಾಧಿಕಾರಿಗಳು, ಬೀದರ, ನಾಡೋಜ ಜೆ. ಎಸ್. ಖಂಡೇರಾವ ಕಲಬುರಗಿ. ನಾಡೋಜ ಡಾ? ವಿ. ಜಿ. ಅಂದಾನಿ, ವಸ್ತ್ರದ ಕೆ.ಎ.ಎಸ್. (ಕಿರಿಯ ಶ್ರೇಣಿ) ಕುಲಸಚಿವರು, ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯ. ನವನಗರ, ಹುಬ್ಬಳ್ಳಿ ,ಬಸವರಾಜ ರೆ. ಉಪ್ಪಿನ ನಿವೃತ್ತ ಚಿತ್ರಕಲಾ ಶಿಕ್ಷಕರು. ಕಲಬುರಗಿ, ಜೆ. ಎಸ್. ನ್ಯಾಮಗೌಡರು ಡಿ.ವಾಯ್.ಎಸ್.ಪಿ. ಹುಮನಾಬಾದ, ವೆಂಕಟೇಶ ಎಸ್. ಗುಡಾಳ ಕ್ಷೇತ್ರ ಶಿಕ್ಷಣಾಧಿಕಾರಿ ಹುಮನಾಬಾದ, ರವೀಂದ್ರರೆಡ್ಡಿ ಎನ್. ಮಾಲಿಪಾಟೀಲ ಅಧ್ಯಕ್ಷರು, ಕ.ರಾ.ಪ್ರಾ.ಶಾ.ಶಿ. ಸಂಘ, ಬೀದರ, ಶೇಖ್ ಮೆಹಬೂಬ ಪಟೇಲ ಅಧ್ಯಕ್ಷ, ಕ.ರಾ.ಪ್ರೌ.ಶಾ.ಶಿ. ಸಂಘ, ಬೀದರ.
ರಾಜಣ್ಣಾ ಮುಗಳಿ ಅಧ್ಯಕ್ಷರು, ಚಿತ್ರಕಲಾ ಶಿಕ್ಷಕರ ಸಂಘ, ಹುಮನಾಬಾದ. ಸೋಮನಾಥ ಪಾಟೀಲ ಹುಡಗಿ ಭಾ.ಜ.ಪ. ಜಿಲ್ಲಾಧ್ಯಕ್ಷರ, ಬೀದರ. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಎಂದು ಚಿತ್ರಕಲಾವಿದ ಮತ್ತು ಪತ್ರಿಕಾ ಛಾಯಾಗ್ರಾಹಕ ನಾರಾಯಣ ಎಂ ಜೋಶಿ ತಿಳಿಸಿದ್ದಾರೆ.