ಬೇಡಿಕೆ ಈಡೇರಿಸಲು ಸಮಿತಿ ರಚನೆ; ಒಕ್ಕೂಟದಿಂದ ಹರ್ಷ
ಬೀದರ:ಜೂ.13: ಕರ್ನಾಟಕರಾಜ್ಯ ಮೋಟಾರ್‍ಡ್ರೈವಿಂಗ್ ಸ್ಕೂಲ್ ಮಾಲೀಕರ ಸಂಘಗಳ ಒಕ್ಕೂಟದ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಾರಿಗೆಇಲಾಖೆಯು ಇಲಾಖಾ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ ಆದೇಶಿಸಿದೆ.
20204ರ ಜೂನ್ 1 ರಂದು ಸಾರಿಗೆ ಸಚಿವರು ಮತ್ತು ಮಜುರಾಯಿಇಲಾಕೆಯ ಸಚಿವರಅಧ್ಯಕ್ಷತೆಯಲ್ಲಿ ನಡೆದಕನಾಟಕ ವಾಹನ ಚಾಲನಾ ತರಬೇತಿ ಶಾಲೆಗಳ ಮಾಲೀಕರ ಸಂಘಗಳ ಒಕ್ಕೂಟ ಬೆಂಗಳೂರು ಇವರೊಂದಿಗಿನ ಸಭೆಯಲ್ಲಿಒಕ್ಕೂಟದಅಧ್ಯಕ್ಷರು ಹಾಗೂ ಇನ್ನಿತರ ಸದಸ್ಯರುಗಳು ಹಲವು ಬೇಡಿಕೆಗಳನ್ನು ಈಢೇರಿಸಲು ಒತ್ತಾಯಿಸಿ, ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸಮಿತಿರಚಿಸಲಾಗಿದೆ.
ಮನವಿಯ ಪ್ರಕಾರ ವಾಹನ ಚಾಲನಾ ಪರವಾನಿಗೆ (ಎಲ್‍ಎಲ್) ಪಡೆಯುವ ಪ್ರತಿಯೊಬ್ಬ ವಾಹನ ಚಾಲಕರಿಗೆರಸ್ತೆ ನಿಯಮ ಹಾಗೂ ರಸ್ಯೆ ಸುರಕ್ಷತೆಯ ಬಗ್ಗೆ ತಿಳಿವಳಿಕೆ ಮತ್ತು ಕಾನೂನು ಅರಿವುಅವಶ್ಯಕತೆಇದೆ. ಆದ್ದರಿಂದ ವಾಹನ ಚಾಲನಾ ಪರವಾನಿಗೆ ಪಡೆಯುವ ಅಭ್ಯರ್ಥಿಗಳು ಕಲಿಕಾ ಚಾಲನಾ ಪತ್ರ ಪಡೆಯುವ ಪ್ರತಿಯೊಬ್ಬಅಭ್ಯರ್ಥಿಗೆ ವಾಹನ ಚಾಲನಾ ತರಬೇತಿ ಶಾಲೆಗಳಿಂದ ನಮೂನೆ- 14 ಪ್ರಮಾಣ ಪತ್ರ ಕಡ್ಡಾಯಗೊಳಿಸಬೇಕು ಎಂದು ಮನವಿ ಪತ್ರದಲ್ಲಿಒಕ್ಕೂಟದಿಂದಕೋರಲಾಗಿದೆ. ಈ ಹಿನ್ನೆಲೆಯಲ್ಲಿ ವಾಹನ ಚಾಲನಾ ತರಬೇತಿ ಶಾಲೆಗಳ ಮಾಲೀಕರ ಸಂಘದ ಈ ಮೇಲಿನ ಬೇಡಿಕೆಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದ್ದಾರೆ.
ಈ ಬೇಡಿಕೆಯಜತೆಗೆಒಕ್ಕೂಟದಇನ್ನಿತರೆ ಬೇಡಿಕೆಗಳ ಸಂಬಂಧ ವರದಿಗಾಗಿ ಕೆಳಕಂಡ ಇಲಾಖಾ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನುರಚಿಸಲಾಗಿದ್ದು, ಸಮಿತಿಯಅಧ್ಯಕ್ಷರನ್ನಾಗಿಅಪರ ಸಾರಿಗೆಆಯುಕ್ತರಾದ ಮಾರುತಿ ಸಾಂಬ್ರಾಂನಿ, ಸಂಚಾಲಕರನ್ನಾಗಿಜಂಟಿ ಸಾರಿಗೆಆಯುಕ್ತರಾದ ಸಿದ್ದಪ್ಪ ಎಚ್. ಕಲ್ಲೇರೆ, ಸದಸ್ಯರುಗಳನ್ನಾಗಿ ಅಧಿಕಾರಿಗಳಾದ ವಸಂತಈಶ್ವರ್‍ಚವ್ಹಾನ್, ಜಿ.ಕೆ. ಬಿರಾದಾರ್, ಸಾದಿಕ್‍ಜಾಫರ್, ಶರಣಪ್ಪಕಲ್ಲಪ್ಪ ಹುಗ್ಗಿ, ಭೀಮರಾಯ ಹಾಗೂ ದಿನಮಣಿ ಅವರುಗಳನ್ನು ನೇಮಿಸಲಾಗಿದೆ.
ಈ ಸಮಿತಿಯುಒಕ್ಕೂಟದ ಬೇಡಿಕೆಗಳ ಕುರಿತುಕರ್ನಾಟಕರಾಜ್ಯ ಮೋಟಾರ್‍ಡ್ರೈವಿಂಗ್ ಸ್ಕೂಲ್‍ನ ಮಾಲೀಕರಒಕ್ಕೂಟದವರಿಂದ ಮಾಜಿತಿ ಪಡೆದು, ಚರ್ಚಿಸಿ, ವಾಹನ ಚಾಲನಾ ಪರವಾನಿಗೆ ಪಡೆಯುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಸಮಯದಲ್ಲಿ ನಮೂನೆ- 14 ಅನ್ನು ಕಡ್ಡಾಯಗೊಳಿಸುವ ಸಂಬಂಧ ಹಾಗೂ ಒಕ್ಕೂಟದವರು ನೀಡಿರುವಇನ್ನಿತರೆ ಬೇಡಿಕೆಗಳ ಕುರಿತು ಪರಿಶೀಲಿಸಿ ವಿವರವಾದ ವರದಿಯನ್ನುಜುಲೈ 10ರೊಳಗೆ ನೀಡುವಂತೆ ಬೆಂಗಳೂರಿಗೆ ಸಾರಿಗೆ ಮತ್ತುರಸ್ತೆ ಸುರಕ್ಷತೆಆಯುಕ್ತರುಆದೇಶದ ಪತ್ರದಲ್ಲಿ ಸೂಚಿಸಿದ್ದಾರೆ.
ಒಕ್ಕೂಟದಿಂದ ಹರ್ಷ
ತಮ್ಮ ಮನವಿಯನ್ನು ಪುರಸ್ಕರಿಸಿ ಸರಕಾರಕೂಡಲೇ ಸಮಿತಿ ರಚಿಸಿರುವುದಕ್ಕೆ ಒಕ್ಕೂಟದಅಧ್ಯಕ್ಷರಾದಆನಂದ್ ವಿ ಪಾಟೀಲ್, ರಾಜ್ಯಒಕ್ಕೂಟದಉಪಾಧ್ಯಕ್ಷರು ಮತ್ತು ಕಲಬುರಗಿಉಸ್ತುವಾರಿಯಲ್ಲಪ್ಪದೊಡ್ಡಮನಿಹಾಗೂ ಪ್ರಮುಖರಾದ ಮಂಜುನಾಥ ಶೆಟಕಾರ್, ಇರ್ಫಾನ್‍ಅಹ್ಮೆದ್, ಸುರೇಶ್ ಬಿರಾದಾರ್ ಹಾಗೂ ಒಕ್ಕೂಟದ ಸದಸ್ಯರುಗಳು ಹರ್ಷ ವ್ಯಕ್ತಪಡಿಸಿದ್ದಾರೆ.