ಕೆಬಿಎನ್ ವಿವಿ : ಯೋಗ ತರಬೇತಿ ಕಾರ್ಯಕ್ರಮ
ಕಲಬುರಗಿ: ಜೂ.13:ಸ್ಥಳೀಯ ಖಾಜಾ ಬಂದಾನವಾಜ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ 10 ದಿನಗಳ ಯೋಗ ತರಬೇತಿಯ ಕಾರ್ಯಕ್ರಮವನ್ನು ವಿವಿಯ ಸೆಮಿನರ್ ಹಾಲ್ ದಲ್ಲಿ ಬುಧವಾರ ಉದ್ಘಾಟಿಸಲಾಯಿತು.
ಮೆಡಿಕಲ್ ಡಾ. ಸಿದ್ದೇಶ ಸಿರವಾರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಯೋಗಾಭ್ಯಾಸದ ಮಹತ್ವದ ಬಗ್ಗೆ ಮಾತನಾಡಿದರು.
ಯೋಗ ತರಬೇತುದಾರ ಶ್ರದ್ಧಾ ಎಸ್. ಅವರು ಯೋಗದ ಇತಿಹಾಸ, ಯೋಗದ ವಿಧಗಳು ಮತ್ತು ಯೋಗಾಭ್ಯಾಸದ ಪ್ರಯೋಜನಗಳನ್ನು ವಿವರಿಸುವ ಪವರ್ ಪಾಯಿಂಟ್ ಪ್ರಸ್ತುತಿಯೊಂದಿಗೆ ವಿದ್ಯಾರ್ಥಿಗಳಿಗೆ ಉಪನ್ಯಾಸವನ್ನು ನೀಡಿದರು. ಜೂ. 12 ರಿಂದ 21 ರವರೆಗೆ ಬೆಳಿಗ್ಗೆ 7 ರಿಂದ 8 ಘಂಟೆಯ ವರೆಗೆ ವಿದ್ಯಾರ್ಥಿಗಳಿಗೆ ನುರಿತ ಯೋಗ ತರಬೇತುದಾರ ಶ್ರದ್ದಾ ಅವರಿಂದ ಯೋಗ ತರಬೇತಿ ನೀಡಲಾಗುತ್ತಿದೆ.
ಫಿಸಿಯಾಲಜಿ ಪೆÇ್ರ. ಸ್ವಾತಿ ಜಂಗಮ್ ಅವರು ಸ್ವಾಗತಿಸಿ ನಿರೂಪಿಸಿದರು. ಫಿಸಿಯಾಲಜಿ ವಿಭಾಗದ ಡಾ. ಫೈಸಲ್ ಅಹ್ಮದ್ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಮೆಡಿ ಮತ್ತು ಶಿಕ್ಷಣ ನಿಕಾಯದ ಎಲ್ಲ ಪ್ರಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.