ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಗರ ಶಾಸಕರಿಂದ ಚಾಲನೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.13:  ನಗರವನ್ನು ಅತ್ಯಾಧುನಿಕ ಸೌಲಭ್ಯಗಳ ನಗರವನ್ನಾಗಿ ರೂಪಿಸುವುದು ನನ್ನ ಸಂಕಲ್ಪ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದ್ದಾರೆ.
ಈ ಬಗ್ಗೆ ಶಾಸಕರ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ
ನಗರದ ವಿವಿಧ ವಾರ್ಡ್ ಗಳಲ್ಲಿ ನಿನ್ನೆ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ  ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು ಎಂದಿದೆ.
ಬಳ್ಳಾರಿ ನಗರ ಬೃಹತ್ ನಗರವಾಗಿದ್ದು, ಇಲ್ಲಿ  ಸಾಕಷ್ಟು ಮೂಲ ಸೌಲಭ್ಯಗಳ ಕೊರತೆ ಇದೆ. ಮೂಲಭೂತ ಸೌಕರ್ಯಗಳ ಪೂರೈಕೆ ಜೊತೆಗೆ ನಗರದಲ್ಲಿ ವಿಶಾಲ ರಸ್ತೆಗಳು, ಫುಟ್ ಪಾತ್, ಒಳಚರಂಡಿ, ಹೊರ ಚರಂಡಿ, ವೃತ್ತಿಯನ್ನು ನಿರ್ಮಿಸುವ ಮೂಲಕ ನಗರವನ್ನು ಅತ್ಯಾಧುನಿಕ ನಗರವನ್ನಾಗಿ ರೂಪಿಸಲಾಗುವುದು ಎಂದು ಹೇಳಿದ್ದಾರೆ.
 ನಗರದ 21ನೇ ವಾರ್ಡಿನ ಕೆಇಬಿ ಸರ್ಕಲ್ ನಿಂದ ಕೆಆರೆಸ್ ಫಂಕ್ಷನ್ ಹಾಲ್ ವರೆಗೆ ಕೆಕೆಆರ್ ಡಿಬಿ ಮೈಕ್ರೋ ಯೋಜನೆ ಅಡಿಯಲ್ಲಿ 2 ಕೋಟಿ 91 ಲಕ್ಷ ರೂ.ಗಳ ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ನಿನ್ನೆ  ಭೂಮಿ ಪೂಜೆ ನೆರವೇರಿಸಿದರು. ಅದೇ ರೀತಿ
ಕೆಕೆಆರ್ ಡಿಬಿ ಮೈಕ್ರೋ ಯೋಜನೆಯಡಿಯಲ್ಲಿ 24 ಲಕ್ಷ ರೂ.ಗಳ ಅನುದಾನದಲ್ಲಿ 3 ನೇ ವಾರ್ಡಿನ ಟ್ಯಾಂಕ್ ಬಂಡ್ ರಸ್ತೆಯಿಂದ ಬೆಂಗಳೂರು ರಸ್ತೆವರೆಗೆ ಸಿಸಿ ರಸ್ತೆ ಮತ್ತು ಒಳಚರಂಡಿ ನಿರ್ಮಾಣ.    25 ಲಕ್ಷ ರೂ.ಗಳಲ್ಲಿ ನಗರದ 6ನೇ ವಾರ್ಡಿನ ಗರೀಬ್ ನವಾಜ್ ಕಾಲೋನಿಯಲ್ಲಿ ಸಿಸಿ ರಸ್ತೆ ಮತ್ತು ಒಳಚರಂಡಿ ನಿರ್ಮಾಣ ಮಾಡಲು ಭೂಮಿ ಪೂಜೆ ನೆರವೇರಿಸಲಾಯಿತು.
ಈ ವೇಳೆ  ಎಪಿಎಂಸಿ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ,  ಪಾಲಿಕೆ ಸದಸ್ಯರಾದ ಸುರೇಖಾ ಮಲ್ಲನಗೌಡ,  ಎಂ.ಪ್ರಭಂಜನಕುಮಾರ್ ಮೊದಲಾದವರು ಇದ್ದರು. ಶಾಸಕರ ಹೇಳಿಕೆ, ಹೇಳಿಕೆಯಾಗಿ ಉಳಿಯದೆ ಅನಿಷ್ಟಾನಗೊಳ್ಳಬೇಕು ಎಂವುದು ಜನರ ಆಶಯವಾಗಿದೆ.
One attachment • Scanned by Gmail