ಕಂಪ್ಲಿ ರಸ್ತೆಯ ದುಸ್ಥಿತಿಬಸ್ ಸಂಚರಿಸುವುದು ದುರ್ಲಬ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜೂ,13- ನಗರದಿಂದ  ಕುಡುತಿನಿ ಮಾರ್ಗವಾಗಿ ಕಂಪ್ಲಿಗೆ ತೆರಳುವ ರಸ್ತೆಯ ದುಸ್ಥಿತಿ ಹೇಳತೀರದಾಗಿದೆ.  ಕುಡುತಿನಿ ಮತ್ತು ತಿಮ್ಮಲಾಪುರ ಮಧ್ಯೆ ಬಿಟಿಪಿಎಸ್ ಬಳಿ ಅಂದಾಜು ಒಂದು ವರೆ ಕಿಲೋ ಮೀಟರ್ ರಸ್ತೆ ಹದಗೆಟ್ಟು ಹಲವು ವರ್ಷಗಳಾಗಿದೆ.
ದೊಡ್ಡದಾದ ಗುಂಡಿಗಳಿಂದ ಕೂಡಿದ್ದು. ಈ ಭಾಗವನ್ನು ಸಂಚರಿಸಲು ಸಣ್ಣ ವಾಹನಗಳು ಯಮ‌ಯಾತನೆ ಪಡುವಂತಿತ್ತು.
ಈಗ ಮಳೆ ಬಂದಿರುವುದರಿಂದ ಬೃಹತ್ ವಾಹನ ಬಸ್ ಗಳು ಸಹ ಸಂಚರಿಸುವುದಕ್ಕೂ ಕಷ್ಟ ಸಾಧ್ಯವಾಗಿದೆ. ಇಂದು ಬೆಳಿಗ್ಗೆ ಸಾರಿಗೆ ಸಂಸ್ಥೆ ಬಸ್ ಸಹ ಈ ರಸ್ತೆಯಲ್ಲಿ ಸಿಕ್ಕಿಕೊಂಡು ಮುಂದೆ ಹೋಗದಂತಾಗಿತ್ತು.
ನಾಮ್ಮದು ಅಭಿವೃದ್ಧಿ ಸರ್ಕಾರ ಎನ್ನುವ ಸ್ಥಳೀಯ ಶಾಸಕ ಜಿ‌.ಎನ್.ಗಣೇಶ್, ಸಂಸದ ಇ.ತುಕರಾಂ ಅವರು ಈ ರಸ್ಥೆಯ ದುಸ್ಥಿತಿಯ ಬಗ್ಗೆಯೂ ಮಾತನಾಡಬೇಕು. ಅಷ್ಠೇ ಅಲ್ಲದೆ ತಾತ್ಕಾಲಿಕ ದುರಸ್ಥಿ ಮಾಡುವ ಕೆಲಸವನ್ನಾದರು ಮಾಡಬೇಕು ಎಂಬುದು ಜನರ ಒತ್ತಾಸೆತಾಗಿದೆ.
One attachment • Scanned by Gmail