ಟಿ ಹೆಚ್ ಎಂ ಬಸವರಾಜ್ ಗೆ  ಬಸವ ಪುರಸ್ಕಾರ ಪ್ರಶಸ್ತಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜೂ,13- ಇತಿಹಾಸ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ಟಿ.ಹೆಚ್.ಎಂ.ಬಸವರಾಜ್ ಅವರು ಪ್ರಸಕ್ತ 2024 ನೇ ಸಾಲಿನ  ಬಸವ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬಸವ ಪರಿಷತ್‌ ಈ ಪ್ರಶಸ್ತಿಯನ್ನು ಜೂ. 15 ರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ  ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನೀಡಿ ಗೌರವಿಸಲಿದ್ದಾರೆ.
ಸಚಿವರಾದ ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ, ಇಸ್ರೋ ವಿಜ್ಞಾನಿ ಬಿ. ಹೆಚ್. ಎಮ್. ದ್ವಾರಕೇಶ್ ಇನ್ನಿತರರು ಪ್ರಶಸ್ತಿ ಪ್ರದಾನ  ಮಾಡಲಿದ್ದಾರೆ.
ಸಾಹಿತ್ಯ, ಸಂಶೋಧನೆ ಹಾಗು  ಕಲಾ ಕ್ಷೇತ್ರದಲ್ಲಿ ಬಸವರಾಜ್ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.