ಭಕ್ತಿ ಸಾಗರದಿಂದ ಎಱ್ರಿತಾತ ರಥೋತ್ಸವ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜೂ,13- ತಾಲೂಕಿನ  ಚೇಳ್ಳಗುರ್ಕಿಯ  ಎಱ್ರಿತಾತನ  ಮಹಾರಥೋತ್ಸವ  ನಿನ್ನೆ ಸಂಜೆ ಭಕ್ತಸಾಗರದ ಮಧ್ಯೆ ಜರುಗಿತು.  ಇಂದು ಸಂಜೆ 7 ಗಂಟೆಗೆ ಹೂವಿನ ರಥೋತ್ಸವ ನಂತರ ಬಾಣೋತ್ಸವ ನಡೆಯಲಿದೆ.
ಮಳೆಯ ಮಧ್ಯೆ ರಥಕ್ಕೆ ಭಕ್ತರು ಹೂವ ಹಣ್ಣು ಎಸೆದು ತಮ್ಮ ಭಕ್ತಿ ನಮನ ಸಲ್ಲಿಸಿದರು.  ನಂತರ ಹರಕೆ ಹೊತ್ತ ಭಕ್ತರು ಕರ್ಪೂರ ಆರತಿಯೊಂದಿಗೆ ಪ್ರದಕ್ಷಿಣೆ ಮಾಡಿದರು. ರಥೋತ್ಸವದ ಅಂಗವಾಗಿ ಎರ್ರಿತಾತನವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಿತ್ತು. ವಿವಿಧ ಅಭಿಷೇಕ ಪೂಜೆ ನಡೆಯಿತು
 ಹಗಲಿರುಳು ನಡೆದ ಸಪ್ತಭಜನೆ ಮುಕ್ತಾಯವಾಯಿತು. ಶ್ರೀ ಎರ್ರಿಸ್ವಾಮಿ ಜೀವ ಸಮಾಧಿ ಟ್ರಸ್ಟ್ ನ ಸಹಯೋಗದೊಂದಿಗೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ರಕ್ತದಾನ ಶಿಬಿರ ಹಮ್ಮಿಕೊಂಡಿತ್ತು.  ಡಾ.ಕರಿಬಸವರಾಜೇಂದ್ರ ಸ್ವಾಮಿಗಳು ಶಿಬಿರ ಉದ್ಘಾಟನೆ ಮಾಡಿ, ರಕ್ತದಾನದ ಮಹತ್ವ ತಿಳಿಸಿದರು.
.