ಬಾಲಕಾರ್ಮಿಕ ವಿಶೇಷ ವಸತಿ ಶಾಲೆಯ ವಿದ್ಯಾರ್ಥಿಗೆ ಗೌರವ ಸನ್ಮಾನ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜೂ,13- ನಗರದಲ್ಲಿ ನಿನ್ನೆ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಾಕ್ರಮದಲ್ಲಿ.  ಬಾಲಕಾರ್ಮಿಕ ವಿಶೇಷ ವಸತಿ ಶಾಲೆಯ ವಿದ್ಯಾರ್ಥಿಯಾಗಿ ಸಂಗೀತಲ್ಲೇ ಉನ್ನತ ಶಿಕ್ಷಣ ಪಡೆದ,   ಪಿಎಚ್ಡಿ ಅಧ್ಯಯನ ಮಾಡುತ್ತಿರುವ ವೀರೇಶ್ ದಳವಾಯಿ ಅವರನ್ನು ಜಿಲ್ಲಾಡಳಿತ ವತಿಯಿಂದ  ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ,  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಮೊದಲಾದವರು  ಸನ್ಮಾನಿಸಿ ಗೌರವಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ಇಂಥವರು ಮುಂದಿನ ಮಕ್ಕಳಿಗೆ ಆದರ್ಶವಾಗಿದ್ದು.  ಇವರಂತೆ ಬಾಲಕಾರ್ಮಿಕ ಪುನರ್ ವಸತಿ ಶಾಲೆಯಲ್ಲಿ ಓದಿದಂತ ವಿದ್ಯಾರ್ಥಿಗಳಲ್ಲಿ ನಿರಂತರ ಶಿಕ್ಷಣವನ್ನು ಮುಂದುವರಿಸಿ ಉನ್ನತ ಶಿಕ್ಷಣದಲ್ಲಿ ಮುಂದುವರಿಯುತ್ತಿರುವ ವೀರೇಶ್ ದಳವಾಯಿಯವರು ನಿಜಕ್ಕೂ ಇತರೆ ಮಕ್ಕಳಿಗೆ ಮಾದರಿ ಎಂದು ಅಭಿಪ್ರಾಯಪಟ್ಟರು.