ದಿನನಿತ್ಯದ ಬದುಕಿನಲ್ಲಿ ಸಕಾರಾತ್ಮಕ ಚಿಂತನೆಗಳಿರಲಿ; ಮನೋಶಾಸ್ತ್ರಜ್ಞ ಡಾ; ಸುಭಾಷ್ ಚಂದ್ರನ್
ಸಂಜೆವಾಣಿ ವಾರ್ತೆ
ದಾವಣಗೆರೆ ಜೂ.೧೩: ಪ್ರತಿಯೊಬ್ಬರ ಆಲೋಚನೆಗಳಲ್ಲಿ ದಿನಕ್ಕೆ 40 ರಿಂದ 80 ಸಾವಿರದವರೆಗೆ ಆಲೋಚನೆಗಳು ಮನಸಿನಲ್ಲಿ ಮೂಡಲಿದ್ದು ಇದರಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಆಯ್ದುಕೊಂಡಾಗ ಮಾತ್ರ ದಿನದ ಬದುಕಿನಲ್ಲಿ ಒತ್ತಡ ಮುಕ್ತರಾಗಿ ಲವಲಿಕೆಯಿಂದ ಇರಬಹುದೆಂದು ಮನೋಶಾಸ್ತ್ರಜ್ಞ ಡಾ; ಸುಭಾಷ್ ಚಂದ್ರನ್ ತಿಳಿಸಿದರು.ಅವರು  ನಗರದ ಜಿಲ್ಲಾ ಪೆÇಲೀಸ್ ಕಚೇರಿ ಸಭಾಂಗಣದಲ್ಲಿ  ಜಿಲ್ಲೆಯ ಪೆÇಲೀಸ್ ಅಧಿಕಾರಿ ಮತ್ತು  ಸಿಬ್ಬಂದಿಗಳಿಗೆ  ಕಾರ್ಯ ಒತ್ತಡ ನಿರ್ವಹಣೆ ಬಗ್ಗೆ ಒಂದು ದಿನದ ಕಾರ್ಯಾಗಾರದಲ್ಲಿ ಪೆÇಲೀಸ್ ಕರ್ತವ್ಯದ ಸಮಯದಲ್ಲಿ ಹಾಗೂ ವೈಯುಕ್ತಿಕ ಜೀವನದಲ್ಲಿ ಹೇಗೆ ಕಾರ್ಯ ಒತ್ತಡ ನಿರ್ವಹಣೆ ಮಾಡುವ ಬಗ್ಗೆ ಉಪನ್ಯಾಸ ನೀಡಿದರು.ಮನುಷ್ಯನಿಗೆ ಮಲಗಿ ಎದ್ದಾಗಿನಿಂದ ಮತ್ತೆ ರಾತ್ರಿ ಮಲಗುವವರೆಗೂ ಅನೇಕ ಚಿಂತನೆಗಳು ಬರಲಿವೆ. ಇದರಲ್ಲಿ ಕರ್ತವ್ಯದ ಸ್ಥಳ ಇರಬಹುದ, ಕುಟುಂಬದ ಮತ್ತು ನೆರೆಹೊರೆಯವರ ಹಾಗೂ ಸಂಬಂಧಿಕರ ಬಗ್ಗೆ ಆಲೋಚಗಳು ಮೂಡುತ್ತವೆ. ಇವುಗಳಲ್ಲಿ ಕೆಲವು ಭಾವನಾತ್ಮಕ, ಕೆಲವು ಸಂತೋಷ, ದುಖಃ, ಕರುಣೆ, ಪ್ರೀತಿ, ಭಕ್ತಿ ಸೇರಿದಂತೆ ಅನೇಕ ಭಾವವಿಕಾರಗಳು ಮೂಡಲಿವೆ. ಆದರೆ ಇವುಗಳಲ್ಲಿ ಯಾವು ಸಕಾರಾತ್ಮಕವೋ ಅಂತಹ ಆಲೋಚನೆಗಳನ್ನು ಮಾತ್ರ ಪರಿಗಣಿಸಿ ನಕಾರಾತ್ಮಕ ಚಿಂತನೆಗಳನ್ನು ಕೈಬಿಡಬೇಕು. ಕೆಲವು ಸಂದರ್ಭದಲ್ಲಿ ಮಕ್ಕಳ ಬಗ್ಗೆ ಚಿಂತನೆ ಮಾಡಿ ಇತರೆಯವರಿಗೆ ಹೋಲಿಕೆ ಮಾಡುವುದುಂಟು, ಆದರೆ ಸಾಮಥ್ರ್ಯವನ್ನು ಹೆಚ್ಚಿಸಲು ಪ್ರಯತ್ನಪಡುವ ನಿಟ್ಟಿನಲ್ಲಿ ಏನು ಮಾಡಬೇಕೆಂಬ ಆಲೋಚನೆ ಬಹಳ ಮುಖ್ಯವಾಗಿರುತ್ತದೆ ಎಂದರು.