ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣ ಗೊಳಿಸಿ
ಚನ್ನಮ್ಮನ ಕಿತ್ತೂರ,ಜೂ.13: ಅಭಿವೃದ್ಧಿ ಕಾಮಗಾರಿಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರರಿಗೆ ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಪಟ್ಟಣದ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿರುವ ತುಮಗೇರಿ ಕೆರೆ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ ಬಾಕ್ಸ್ ಟೈಪ್ ಕೆರೆಯ ತಡೆಗೋಡೆಯ ಕಾಮಗಾರಿಯನ್ನು ವಿಕ್ಷೀಸಿ ಅವರು ಮಾತನಾಡಿದರು.
ಮನುಷ್ಯನ ನೆಮ್ಮದಿ ಬದುಕಿಗೆ ಪರಿಸರ ರಕ್ಷಣೆ ಅಗತ್ಯವಾಗಿದ್ದು ಅದಕ್ಕೆ ಮೂಲ ನೀರು. ಕ್ಷೇತ್ರಾಧ್ಯಾಂತ ಈ ಮಳೆಗಾಲದಲ್ಲಿ ನೀರು ಪೋಲಾಗದಂತೆ ಪ್ರತಿ ಕೆರೆಗಳನ್ನು ರಕ್ಷಿಸುವ ಮೂಲಕ ಹಸಿರಿನಿಂದ ಕೂಡಿದ ಪರಿಸರ ನಿರ್ಮಾಣಕ್ಕೆ ಪ್ರಯತ್ನಿಸಬೇಕಿದೆ.
ಪರಿಸರ, ನೀರು ರಕ್ಷಣೆಗಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಶಾಲೆಗಳಲ್ಲಿ ನಡೆಯಬೇಕು ಎಲ್ಲರೂ ಸೇರಿ ಜಾಗೃತಿ ಮೂಡಿಸೋಣ.
ಕೆರೆಗಳಿಗೆ ತಡೆಗೊಡೆಗಳ ನಿರ್ಮಿಸುವುದರಿಂದ ಅಂತರ್‍ಜಲ ಮಟ್ಟ ಹೆಚ್ಚಳಕ್ಕೆ ಪೂರಕವಾಗಿ ರೈತರಿಗೆ ಹೆಚ್ಚಿನ ಅನಕೂಲವಾಗುವವು ಹೊಸಕೆರೆ ನಿರ್ಮಾಣ ಹಳೆ ಕೆರೆಗಳ ಪುನಶ್ರ್ಚನಕ್ಕೆ ಸರ್ಕಾರ ಆದ್ಯತೆ ನೀಡಿದೆ ಎಂದರು.
ತುಮಗೇರಿ ಕೆರೆ ತಡೆಗೋಡೆ ಯಾವಾಗೋ ನಿರ್ಮಾಣವಾಗಬೇಕಾಗಿತ್ತು ಅದು ಸಾಧ್ಯವಾಗಿರಲಿಲ್ಲ. ಮಳೆಗಾಲದಲ್ಲಿ ಕೆರೆದಂಡೆ ಒಡೆದು ಜನರ ಸಮಸ್ಯೆ ಹೇಳತೀರಲಾರದು ಆzರೆ ಈಗಿನ ಶಾಸಕರು ಅದನ್ನು ಗಮನಿಸಿ ಸರ್ಕಾರ ಅನುದಾನದಡಿಯಲ್ಲಿ ಗೋಡೆ ನಿರ್ಮಿಸಲು ಕಾಳಜಿಪೂರಕವಾಗಿ ಆಸಕ್ತಿವಹಿಸಿ ಕೆಲಸ ಆರಂಬಿಸಿದ್ದು ಖುಷಿ ತಂದಿದೆ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದರು.
ಇದೇ ಸಮಯ ಪ.ಪಂ ಸದಸ್ಯರುಗಳಾದ ಎಫ್.ಎಂ. ಜಕಾತಿ, ಪ್ರವೀಣಗೌಡರ ಜಕ್ಕನಗೌಡರ, ಸ್ಥಳೀಯರಾದ ಬಸವರಾಜ ಸಂಗೋಳ್ಳಿ, ಮಡವಾಳಿ ಮಾಳಗಿ, ಅಶಪಾಕ ಸುತ್ತಗಟ್ಟಿ, ಉಮೇಶ ಹುಂಬಿ, ಸೇರಿದಂತೆ ಸಾರ್ವಜನಿಕರು ಸಲಹೆ ನೀಡಿದರು.