ಬಾಲಕಾರ್ಮಿಕರ ವಿರೋಧಿ ದಿನಾಚರಣೆ
ನವಲಗುಂದ,ಜೂ13: ಬಾಲ ಕಾರ್ಮಿಕ ಪದ್ಧತಿ ಇಡೀ ವಿಶ್ವಕ್ಕೆ ಅಂಟಿದ ಶಾಪವಿದು, ಬಾಲ್ಯದಲ್ಲಿ ಕಲಿಯುವ ಮಕ್ಕಳು ಗಾರೆ ಕೆಲಸ, ಗ್ಯಾರೇಜ್, ಅಂಗಡಿ,ಹೊಲಗದ್ದೆಗಳಲ್ಲಿ ಕೈಗಾರಿಕೆಗಳಲ್ಲಿ , ಮುಂತಾದಡೆ ಕೆಲಸ ಮಾಡುತಿದ್ದರೆ, ಇನ್ನೂ ಕೆಲ ಮಕ್ಕಳು ಬಿಕ್ಷಾಟನೆಯಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಬಾಲಾಪರಾಧಿಗಳಾಗುತ್ತಿದ್ದಾರೆ. ಇದು ದುರಾದುಷ್ಟಕರ ಸಂಗತಿ ಎಂದು ಶಂಕರ ಮಹಾವಿದ್ಯಾಲಯ ಪ್ರಚಾರ್ಯರಾದ ಡಾ. ಎಸ್ ವಿ ಬಡಿಗೇರ ಕಳವಳವ್ಯಕ್ತಪಡಿಸಿದರು.
ಶಂಕರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ “ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಾಲ ಕಾರ್ಮಿಕ ಪದ್ಧತಿ ಹೋಗಲಾಡಿಸಲು ಪರಿಹಾರವೆಂದರೆ ಶಿಕ್ಷಣ. ಇಂತಹ ಮಕ್ಕಳನ್ನು ಶಿಕ್ಷಣವಾಹಿನಿಗೆ ತಂದರೆ ಇಂತಹ ಕೃತ್ಯಗಳು ಕಡಿಮೆಯಾಗಿ ದೇಶ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂದರು.
ಎನ್ ಎಸ್ ಎಸ್ ಅಧಿಕಾರಿ ಡಾ ಎಂ ಎನ್ ಹಾರೋಗೇರಿ ಅವರು ಪ್ರಸ್ತಾವಿಕವಾಗಿ ಮಾತನಾಡಿ ಸರ್ಕಾರ ಈ ಪದ್ದತಿಯನ್ನು ಹೋಗಲಾಡಿಸಲು 1986 ರಲ್ಲಿಯೇ ರಾಷ್ಟ್ರಿಯ ಶಿಕ್ಷಣ ನೀತಿಯಲ್ಲಿ ಭಾರತದ ಪ್ರತಿಯೊಂದು ಮಗುವೂ 6 ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯಲು ಅವರ ಹಕ್ಕು. ಎಂದು ಹೇಳಿ, ಮಕ್ಕಳನ್ನು ಶಾಲೆಗೆ ಕಳುಹಿಸದ ಪಾಲಕರು ಕಾನೂನು ಪ್ರಕಾರ ಅಪರಾಧಿಗಳಾಗುತ್ತಾರೆ. ಅವರ ಹಕ್ಕನ್ನು ಕಿತ್ತುಕೊಳ್ಳಲು ಯಾರಿಗೂ ಹಕ್ಕಿಲ್ಲ, ಎಲ್ಲರೂ ಶಿಕ್ಷಣ ವಾಹಿನಿಗೆ ಬರಬೇಕು ಎಂದು ಸರ್ಕಾರ ಆದೇಶ ಮಾಡಿತು. ಇದರ ಮದ್ಯಯೂ ಇಂತಹ ಅನಿಷ್ಟ ಪದ್ಧತಿ ಜಾರಿಯಲ್ಲಿರುವುದು ವಿಷಾದವೆನಿಸುತ್ತದೆ ಎಂದರು
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಧ್ಯಾಪಕರಾದ ಡಾ, ಶೀಲಾ ತುಬುಚಿ, ಡಾ ಆರ್. ಪಿ. ಚವ್ವಾಣ, ಎನ್. ಎಸ್. ಎಸ್. ಸ್ವಯಂ ಸೇವಕರು ಸೇರಿದಂತೆ ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.