ಬಸವಣ್ಣನವರ ತತ್ವ ಅರಿತರೆ ಜೀವನ ಸಾರ್ಥಕ
ಚನ್ನಮ್ಮನ ಕಿತ್ತೂರು,ಜೂ13: ನಾವೆಲ್ಲರೂ ಬಸವಣ್ಣವರ ತತ್ವಗಳನ್ನು ಅರಿತರೆ ಜೀವನ ಸಾರ್ಥಕವಾಗುವುದರ ಜೊತೆಗೆ ಬದುಕನ್ನು ಕಟ್ಟಿಕೊಳ್ಳಲು ಅನುಕುಲಕರವಾಗುತ್ತದೆ ಎಂದು ಐಪಿಎಸ್ ಅಧಿಕಾರಿ ರವಿ ಚನ್ನನವರ ಹೇಳಿದರು.
ತಾಲೂಕಿನ ಹುಣಸಿಕಟ್ಟಿ ರುದ್ರಸ್ವಾಮಿಗಳ ಮಠದಲ್ಲಿ ಬೆಳ್ಳಿ ಮೂರ್ತಿ ಅನಾವರಣ ಹಾಗೂ ಹುಣಸಿಕಟ್ಟಿ ಸಂಭ್ರಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಕಾಯಕವೇ ಕೈಲಾ¸ ಎಂದು ಕೆಲಸ ಮಾಡಿದ ಜ್ಞಾನಿ ಬಸವಣ್ಣನವರು ನಾವು ಮಾಡುವ ಕೆಲಸದಲ್ಲಿ ನಮಗೆ ಕೀಳರಿಮೆ ಇರಬಾರದು. ಅದೇ ರೀತಿ ಇಂದಿನ ಯುವಕರು ಸಾಧನೆ ಮಾಡುವುದರ ಮೂಲಕ ಯಶಸ್ಸು ಕಾಣಬೇಕು ಎಂದರು.
ಈ ವೇಳೆ ಮಾಜಿ ವಿ.ಪ.ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕ ಬಾಬಾಸಾಹೇಬ ಪಾಟೀಲ, ಮಹಾಂತೇಶ ಮತ್ತಿಕೊಪ್ಪ, ಚನ್ನಬಸಪ್ಪ ಮೊಕಾಶಿ, ಸಿ.ಆರ್.ಪಾಟೀಲ, ಆರ್.ಕೆ ಅಂಗಡಿ, ಅಶೋಕ ಯರಗೊಪ್ಪ, ಶಂಕರ ಹೊಳಿ, ಕೃಷಿ ಅಧಿಕಾರಿ ಪ್ರಭಾಕರ ಇತ್ನಾಳ, ಅಮೀತ ಕುಂಬೇಕರ, ಜ್ಯೋತಿಬಾ ಭರಮಪ್ಪನವರ, ರವಿಂದ್ರ ಗಡಾದ , ಉಮೇಶ ಪಾಟೀಲ, ಸೇರಿದಂತೆ ಸಾರ್ವಜನಿಕರಿದ್ದರು. ವಿವೇಕ ಕುರಗುಂದ ಸ್ವಾಗತಿಸಿ ನಿರೂಪಿಸಿದರು.