ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗೆ ಸಹಕಾರ ಅಗತ್ಯ
ಬಾಗಲಕೋಟೆ,ಜೂ13: ಬಾಲ ಕಾರ್ಮಿಕ ಪದ್ದತಿ ಪಿಡುಗಾಗಿ ಪರಿಣಮಿಸಿದ್ದು, ನಿರ್ಮೂಲನೆಗೆ ಎಲ್ಲರ ಸಹಕಾರಅಗತ್ಯವಾಗಿದೆಎಂದು ಪ್ರಧಾನಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದಎನ್.ವಿ.ವಿಜಯ ಹೇಳಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಬಾಲಕಾರ್ಮಿಕಯೋಜನಾ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಅವರು ಬಾಲ ಕಾರ್ಮಿಕರುಇನ್ನುಅಲ್ಲಲ್ಲಿಕಂಡುಬರುತ್ತಿದ್ದಾರೆ. ನಿರ್ಮೂಲನೆಗೆ ಸರಕಾರ ಕಾಯ್ದೆಗಳನ್ನು ಜಾರಿಗೆತಂದಿದೆ. ಆದರೂ ಸಹ ನಿರೀಕ್ಷಿತ ಪ್ರಮಾಣದಲ್ಲಿ ನಿರ್ಮೂಲನೆ ಆಗಿರುವದಿಲ್ಲ. ನಿರ್ಮೂಲನೆಗೆ ವಿವಿಧ ಇಲಾಖೆ ಹಾಗೂ ಸಾರ್ವಜನಿಕರ ಸತತ ಪ್ರಯತ್ನ ಸಹಕಾರಅಗತ್ಯವಾಗಿದೆಎಂದು ತಿಳಿಸಿದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿಜಾನಕಿ ಕೆ.ಎಂ ಬಾಲ ಕಾರ್ಮಿಕ ನಿರ್ಮೂಲನೆ ಕುರಿತು ಪ್ರತಿಜ್ಞಾವಿಧಿಯನ್ನು ಬೋಧಿಸಿ ಮಾತನಾಡಿದಅವರು ಮಕ್ಕಳು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಶಿಕ್ಷಣ ಅಗತ್ಯವಾಗಿದೆ. ಶಿಕ್ಷಣ ಕೊಡುವ ವೇಳೆಯಲ್ಲಿ ಕೆಲಸದಲ್ಲಿತೊಡಗಿಸುವದರಿಂದ ಬಾಲ್ಯದಜೀವನಉತ್ತಮವಾಗಿರಲು ಸಾಧ್ಯವಾಗುವದಿಲ್ಲ. ಬಾಲಕಾರ್ಮಿಕ ಪದ್ದತಿ ನಿರ್ಮೂಲಣೆಕಾಯ್ದೆ ಸಮರ್ಪಕ ಅನುಷ್ಠಾನಗೊಳಿಸುವಲ್ಲಿ ಕಾರ್ಮಿಕಇಲಾಖೆಯಜೊತೆಇತರೆ ಇಲಾಖೆಗಳ ಸಹಕಾರಅಗತ್ಯವಾಗಿದೆ. ಉತ್ತಮ ಸಮಾಜ ನಿರ್ಮಾಣದಲ್ಲಿಎಲ್ಲರ ಪಾತ್ರ ಮುಖ್ಯವಾಗಿದ್ದು, ಉತ್ತಮ ಬಾಲ್ಯರೂಪಿಸುವದರಜೊತೆಗೆ ಅನಿಷ್ಟ ಪದ್ದತಿಯಿಂದ ಮುಕ್ತಗೊಳಿಸಬೇಕು. ಶಿಕ್ಷೆಗಿಂತ ಸುಧಾರಣೆ ಮುಖ್ಯವಾಗಿದೆಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹೇಶ ಪಾಟೀಲ ಮಾತನಾಡಿ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವ ಕೆಲಸವಾಗಬಾರದು. ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗೆ ಬಾಲಕಾರ್ಮಿಕ ಪದ್ದತಿ ವಿರೋಧಿಕಾಯ್ದೆಜಾರಿಗೆತಂದಿದೆ. ಮಕ್ಕಳ ಬಾಲ್ಯವನ್ನು ರಕ್ಷಿಸಿ ಬೆಳೆಸಲು ಬದ್ದರಾಗಬೇಕಿದೆಎಂದು ತಿಳಿಸಿದರು. ಜಿಲ್ಲಾಕಾರ್ಮಿಕಅಧಿಕಾರಿರಮೇಶ ಸುಂಬಡ ಮಾತನಾಡಿ ಬಾಲ ಕಾರ್ಮಿಕ ನಿರ್ಮೂಲನೆ ಎಲ್ಲ ಸಹಕಾರಅಗತ್ಯವಾಗಿದ್ದು, ಮಕ್ಕಳನ್ನು ಕೆಲಸ ಮಾಡುವುದುಕಂಡುಬಂದಲ್ಲಿ 1098ಗೆ ಕರೆ ಮೂಲಕ ಮಾಹಿತಿ ನೀಡಲು ತಿಳಿಸಿದರು.
ವಕೀಲರು ಹಾಗೂ ಉಪ ಕಾನೂನು ನೆರವುಅಭೀರಕ್ಷಕ ಪ್ರಶಾಂತ ನಾರಾಯಣಕರ ಬಾಲ ಮತ್ತುಕಿಶೋರಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986, ತಿದ್ದುಪಡಿಕಾಯ್ದೆ 2016 ಕುರಿತುಉಪನ್ಯಾಸ ನೀಡಿದರು. ಪ್ರಾರಂಭದಲ್ಲಿಜಿಲ್ಲಾ ಬಾಲಕಾರ್ಮಿಕಯೋಜನಾ ಸಂಸ್ಥೆಯಯೋಜನಾ ನಿರ್ದೇಶಕ ಸುಧಾಕರ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ 2ನೇ ಹೆಚ್ಚುವರಿಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರಜಿದ್ದಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಪೂಜಾರ ಸೇರಿದಂತೆಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಜಾಗೃತಿಜಾಥಾಕ್ಕೆ ಚಾಲನೆ ನೀಡಲಾಯಿತು.