ಪ್ರಗತಿ ಪರಿಶೀಲನಾ ಸಭೆ
ಬಾಗಲಕೋಟೆ,ಜೂ13: ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಭಿಯಾನದರೂಪದಲ್ಲಿಕಾರ್ಯ ಕೈಗೊಳ್ಳಬೇಕೆಂದು ಜಿ.ಪಂ ಮುಖ್ಯಕಾರ್ಯನಿರ್ವಾಹಕಅಧಿಕಾರಿ ಶಶಿಧರ ಕುರೇರತಾಲೂಕಾ ಪಂಚಾಯತಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ನಡೆದಜಿಲ್ಲಾ ಪಂಚಾಯತ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದಅವರು ಪ್ರತಿಯೊಂದುಕಾರ್ಯದಲ್ಲಿ ಬೇಜವಾಬ್ದಾರಿ ಸಲ್ಲದು. ಕರ್ತವ್ಯ ನಿಷ್ಠೇಯಿಂದ ಪ್ರಮಾಣಿಕವಾಗಿ ಕೆಲಸ ನಿರ್ವಹಿಸಿದಲ್ಲಿ ಯೋಜನೆಗಳಿಗೆ ಬೆಲೆ ದೊರೆಯುತ್ತದೆ. ಇದರಿಂದಜನರಿಗೆ ಯೋಜನೆಗಳ ಲಾಭ ಸಿಗಲಿದೆ. ಬಾಕಿ ಉಳಿದ ಕಾರ್ಯವನ್ನುಅಭಿಯಾನದರೂಪದಲ್ಲಿಕಾರ್ಯಕೈಗೊಂಡು ಪೂರ್ಣಗೊಳಿಸಲು ಸೂಚಿಸಿದರು.
ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವತೆರಿಗೆ ವಸೂಲಾತಿ ಪ್ರಮಾಣಕುಂಠಿತಗೊಂಡಿದ್ದು, ಪ್ರಸ್ತುತ ವರ್ಷದ ಬೇಡಿಕೆಯಂತೆಕರ ವಸೂಲಾತಿಗೆ ಕ್ರಮಕೈಗೊಳ್ಳಬೇಕು. ಜಿಲ್ಲೆಗೆ ಮಂಜೂರಾದಎಲ್ಲ 157 ಕೂಸಿನ ಮನೆ ಕೇಂದ್ರವನ್ನುತಕ್ಷಣವೇ ಪ್ರಾರಂಭಿಸಿ, ಕೇಂದ್ರಕ್ಕೆ ಬೇಕಾದ ಸೌಭ್ಯಗಳನ್ನು ಕಲ್ಪಿಸಲು ತಿಳಿಸಿದರು. ಜಿಲ್ಲೆಯಲ್ಲಿ ಹೊಸದಾಗಿ ಮಂಜೂರಾದ 22 ಗ್ರಂಥಾಲಯಗಳನ್ನು ಪ್ರಾರಂಭಿಸಲು ಹಾಗೂ ಸಾರ್ವಜನಿಕರಿಗೆ ಸೌಲಭ್ಯಕಲ್ಪಿಸಲು ಸೂಚಿಸಿದರು.
ಗ್ರಾಮ ಪಂಚಾಯತಿವಾರು ಪ್ರಗತಿ ಪರಿಶೀಲನೆ ನಡೆಸಿದ ಸಿಇಓ ಕುರೇರಅವರು ಸ್ವಚ್ಛ ಭಾರತ ಮಿಷನ್‍ದಡಿಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ಫಲಾನುಭವಿಗಳ ಆಯ್ಕೆ ಮಾಡಿ ನಿಗದಿತಅವಧಿಯಲ್ಲಿ ಪ್ರಗತಿ ಸಾಧಿಸಬೇಕು. ಈಗಾಗಲೇ ಜಿಲ್ಲೆಯ 195 ಗ್ರಾಮ ಪಂಚಾಯತಿ ಪೈಕಿ 177 ಸ್ವ-ಸಹಾಯ ಸಂಘದ ಮಹಿಳೆಯರಿಗೆ ವಾಹನ ಚಾಲನಾ ತರಬೇತಿ ನೀಡಿಡ್ರೈವಿಂಗ್ ಲೈಸೆನ್ಸ್‍ಕೊಡಿಸಲಾಗಿದೆಎಂದು ತಿಳಿಸಿದರು. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿಗ್ರಾಮ ಪಂಚಾಯತಿವಾರುಟಾರಗೇಟ್‍ಕೊಡುವ ಮೂಲಕ ಪ್ರಗತಿಆಗುವಂತೆ ಮಾಡಬೇಕುಎಂದರು.
15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ನಿಗದಿತ ಅವಧಿಯೊಳಗೆ ಖರ್ಚು ಭರಿಸಿ ಪ್ರಗತಿ ಸಾಧಿಸಲು ತಿಳಿಸಿದರು. ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಗೆ ನೀಡಿದ ಗುರಿಯಂತೆ ಮಾನವ ದಿನಗಳನ್ನು ಸೃಜಿಸಲು ತಿಳಿಸಿದರು. ವಸತಿಯೋಜನೆಯಡಿ ಬಸವ ವಸತಿ ಮತ್ತುಅಂಬೇಡ್ಕರ ವಸತಿಯೋಜನೆಯಡಿ ನೀಡಲಾದಗುರಿಯನ್ನು ನಿಗದಿತಅವಧಿಯಲ್ಲಿ ಪೂರ್ಣಗಳಿಸಲು ತಿಳಿಸಿದರು. ಇತರೆ ಯೋಜನೆಗಳ ಬಗ್ಗೆ ನಿಗದಿತಅವಧಿಯಲ್ಲಿ ಪ್ರಗತಿ ಸಾಧಿಸಲು ತಿಳಿಸಿದರು.
ಸಭೆಯಲ್ಲಿಜಿಲ್ಲಾ ಪಂಚಾಯತ ಉಪಕಾಂiÀರ್iದರ್ಶಿ ಅಮರೇಶ ನಾಯಕ, ಮುಖ್ಯಯೋಜನಾಧಿಕಾರಿ ಪುನಿತ್, ಯೋಜನಾ ನಿರ್ದೇಶಕಎನ್.ವಾಯ್.ಬಸರಿಗಿಡದ, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ, ಸಹಾಯಕಯೋಜನಾಧಿಕಾರಿ ಭೀಮಪ್ಪ ತಳವಾರ, ಸಹಾಯಕ ಕಾರ್ಯದರ್ಶಿ ವೆಂಟಕೇಶ ಸೇರಿದಂತೆಜಿಲ್ಲೆಯಎಲ್ಲತಾಲೂಕಿನಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.