ಜೂ.16ರಂದು ನಗರದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಉದ್ಘಾಟನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.13:- ನಗರದ ವಿವೇಕನಗರದಲ್ಲಿರುವ ಫಾರೆಸ್ಟ್ ನರ್ಸರಿ ಬಳಿ ನಿರ್ಮಿಸಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರವನ್ನು ಜೂ.16 ರಂದು ಉದ್ಘಾಟನೆ ಮಾಡಲಾಗುವುದು ಎಂದು ಶ್ರೀ ಶಿರಡಿ ಸಾಯಿಬಾಬಾ ಧಾರ್ಮಿಕ ಮತ್ತು ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಆರ್. ರಾಜು ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಡಿ ಶಾಯಿ ಬಾಬಾ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಜೂ.14, 15, 16 ರಂದು ಮೂರು ದಿನಗಳ ಕಾಲ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗಿದೆ. ಜೂ.14 ರಂದು ಬೆಳಗ್ಗೆ ಹಾಗೂ ಮಧ್ಯಾಹ್ನ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದೆ. ಅಂದು ಸಂಜೆ 6 ಗಂಟೆಗೆ ಶ್ರೀ ಶಿರಡಿ ಸಾಯಿ ಬಾಬಾರವರ ಹಾಗೂ ಧ್ಯಾನಾಂಜನೇಯಸ್ವಾಮಿಯವರ ಭಕ್ತಿಗೀತೆಗಳ ಗಾಯನ ನಡೆಯಲಿದೆ ಎಂದರು.
ಜೂ.15 ರಂದು ಸಂಜೆ 4 ಗಂಟೆಗೆ ಪ್ರಧಾನ ಹೋಮಗಳು, ಶಾಂತಿ-ಪುಷ್ಟಿ ಹೋಮಗಳು, ಕುಠೀರ ಹೋಮ, ಪೂಜೆ, ಆರತಿ ನಡೆಯಲಿದೆ. ಸಂಜೆ 6 ಗಂಟೆಗೆ ಖ್ಯಾತ ಹರಿಕಥಾ ವಿದೂಷಿ ಡಾ.ಮಾಲಿನಿ ಅವರಿಂದ ಶ್ರೀ ಶಿರಡಿ ಸಾಯಿಬಾಬಾರವರ ವೈಭವದ ಕಥಾವಲೋಕನ ಜರುಗಲಿದೆ. 16ರಂದು ತ್ರಿವೇಣಿ ಸಂಗಮದಿಂದ ನೀರು ತಂದು ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಅದನ್ನು ಸಾಯಿಬಾಬಾ ಮಂದಿರಕ್ಕೆ ಕೊಂಡೊಯ್ಯಲಾಗುವುದು. ದೇವರ ಪ್ರತಿμÁ್ಟಪನೆ. ಮಹಾಕುಂಭಾಭಿμÉೀಕ, ಮಹಾಮಂಗಳಾರತಿ ಬಳಿಕ ಸುಮಾರು 15 ಸಾವಿರಕ್ಕು ಹೆಚ್ಚು ಭಕ್ತರಿಗೆ ಪ್ರಸಾದ ವಿನಿಯೋಗವನ್ನು ಆಯೋಜನೆ ಮಾಡಲಾಗಿದೆ ಎಂದರು.
ಟ್ರಸ್ಟ್ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಮಾತನಾಡಿ, ರಾಜಸ್ತಾನದ ಜೈಪುರದಿಂದ ಸಾಯಿಬಾಬಾ ಅವರ ಮೂಲ ವಿಗ್ರಹ ತಯಾರಿಸಲಾಗಿದೆ. ಅಯೋಧ್ಯೆಯಲ್ಲಿ ಹನುಮಂತ ಇರುವ ರೀತಿ ಧ್ಯಾನಾಂಜನೇಯಸ್ವಾಮಿ ವಿಗ್ರಹವನ್ನು ಇದೇ ಸಂದರ್ಭದಲ್ಲಿ ಪ್ರತಿμÁ್ಟಪಿಸಲಾಗುವುದು. ಇದು ರಾಜ್ಯದಲ್ಲಿಯೇ ಮೊದಲು. ಮಹಾರಾಷ್ಟ್ರದ ಶ್ರೀಶಿರಡಿ ಸಾಯಿಬಾಬಾ ಮಂದಿರದ ಪ್ರಧಾನ ಅರ್ಚಕರಾದ ಶ್ರೀ ಪಂಡಿತ್ ಅಮಿತ್ ದೇಶ್‍ಮುಖ್ ಸೇರಿದಂತೆ 5 ಅರ್ಚಕರಿಂದ ಪೂಜಾ ಕೈಂಕರ್ಯಗಳು ನೆರವೇರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ. ಶಾಯಿ ಬಾಬಾ ಅವರ ಕೃಪೆಗೆ ಪಾತ್ರರಾಗಬೇಕೆಂದು ಅವರು ಮನವಿ ಮಾಡಿದರು. ಸುದ್ದಿಗೋಷ್ಟಿಯಲ್ಲಿ ಟ್ರಸ್ಟ್‍ನ ಗೌರವಾಧ್ಯಕ್ಷ ಎಂ.ರಾಜು, ಕಾರ್ಯಾಧ್ಯಕ್ಷ ಉಮೇಶ್ ಎಸ್‍ಪಿಕೆ, ಕಾರ್ಯದರ್ಶಿ ಆರ್.ರಾಜು ಎಸ್‍ಪಿಕೆ, ಸಹ ಕಾರ್ಯದರ್ಶಿ ಆರ್. ಮುರುಗೇಶನ್, ಸದಸ್ಯರಾದ ವಿ. ಶಕ್ತಿ, ಉತ್ತರಸ್ವಾಮಿ, ಆರ್. ಲೋಕೇಶ್ ಇತರರು ಇದ್ದರು.