ಮಕ್ಕಳಿಗೆ ದುಡಿಮೆ ಬೇಡ, ಶಿಕ್ಷಣ ನೀಡಿ
ಕಲಬುರಗಿ:ಜೂ.12:ಬಾಲ ಕಾರ್ಮಿಕ ಪದ್ಧತಿಯುಮಕ್ಕಳ ಬೆಳವಣಿಗೆಗೆ ಮಾರಕವಾಗಿದ್ದು, ಅದರ ನಿರ್ಮೂಲನೆಗೆ ಸಂವಿಧಾನ, ಸರ್ಕಾರಗಳು ಅನೇಕ ಕಾಯ್ದೆ-ಕಾನೂನುಗಳನ್ನು ಜಾರಿಗೊಳಿಸಿದೆ. ಇವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ ನಿರ್ಮೂಲನೆ ಮಾಡಲು ಅಧಿಕಾರಿಗಳ ಇಚ್ಛಾಶಕ್ತಿ ಹಾಗೂ ಪಾಲಕ-ಪೋಷಕ, ಉದ್ಯೋಗದಾತರ ಸೇರಿದಂತೆಎಲ್ಲರಸಹಕಾರಅಗತ್ಯವಾಗಿದೆ. ಮಕ್ಕಳಿಗೆ ದುಡಿಮೆಗೆ ಕಳಿಸಿದೆ, ಶಿಕ್ಷಣ ನೀಡಬೇಕುಎಂದುಪ್ರಾಚಾರ್ಯರವೀಂದ್ರಕುಮಾರಸಿ.ಬಟಗೇರಿ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿಎನ್.ಎಸ್.ಎಸ್‍ಘಟಕದ ವತಿಯಿಂದ ಬುಧವಾರಏರ್ಪಡಿಸಲಾಶಗಿದ್ದ’ವಿಶ್ವಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ಯನ್ನು ಉದ್ಘಾಟಿಸಿ ಅವರುಮಾತನಾಡುತ್ತಿದ್ದರು.
ಎನ್.ಎಸ್.ಎಸ್‍ಅಧಿಕಾರಿಎಚ್.ಬಿ.ಪಾಟೀಲ ಮಾತನಾಡಿ, ಕಾರ್ಮಿಕ ಕಾನೂನುಗಳು ಸ್ವಾತಂತ್ರ್ಯ ಪೂರ್ವದಿಂದಲೇರಚಿಸಲಾಗಿದೆ. ನಂತರ ಅನೇಕ ಕಾಯ್ದೆಗಳನ್ನು ಜಾರಿಗೊಳಿಸಿ ಬಾಲ ಕಾರ್ಮಿಕತೆಯ ನಿರ್ಮೂಲನೆಗೆ ಶ್ರಮಿಸಲಾಗುತ್ತಿದೆ. ಶಿಕ್ಷಣ ದೊರೆತರೆ ಹಾಗೂ ಬಡತನ ನಿರ್ಮೂಲನೆಯಾದರೆಬಾಲ ಕಾರ್ಮಿಕತೆನಿರ್ಮೂಲನೆಯಾಗುತ್ತ ಎಂಬ ಸಂಗತಿಯಿಂದಸರ್ಕಾರಗಳು ಅನೇಕ ಸೌಕರ್ಯಗಳನ್ನು ನೀಡುತ್ತಿವೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಪಾಲಕ-ಪೋಷಕ ವರ್ಗದವರುತಮ್ಮ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಮಾಡದೆ, ಶಿಕ್ಷಣ ನೀಡಿ ಸದೃಢ ಮಾನವ ಸಂಪನ್ಮೂಲವನ್ನಾಗಿಸಬೇಕುಎಂದರು.
ಬಾಲ ಕಾರ್ಮಿಕತೆಯಿಂದಾಗುವ ದುಷ್ಪರಿಣಾಮಗಳನ್ನು ಬಾಲ ಕಾರ್ಮಿಕರು, ಪಾಲಕ-ಪೋಷಕ, ಸಮುದಾಯಕ್ಕೆ ಮನವರಿಕೆ ಮಾಡಿಕೊಟ್ಟು, ಅವರಲ್ಲಿ ಮಾನಸಿಕ ಧೈರ್ಯವನ್ನುತುಂಬಬೇಕು. ಅಂತಹ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಯೋಜನೆ,ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಬಾಲ ಕಾರ್ಮಿಕ ಪದ್ಧತಿನಾಶಪಡಿಸಬಹುದಾಗಿದೆಎಂದು ಹೇಳಿದರು.
ಕಾರ್ಯಕ್ರಮದಲ್ಲಿಕಾಲೇಜಿನಉಪನ್ಯಾಸಕ ಮಲ್ಲಿಕಾರ್ಜುನದೊಡ್ಡಮನಿ, ಪ್ರಮುಖರಾದರಕ್ಷಿತಾ, ಶುಗುಪ್ತ, ಸೋಹೆಲ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.