ಕೆಕೆ ಅಭಿವೃದ್ಧಿ: ಜೂ.14ರಂದು ಸಿಎಂ ಪರಿಶೀಲನಾ ಸಭೆ
ಕಲಬುರಗಿ:ಜೂ.12: ಕಲ್ಯಾಣಕರ್ನಾಟಕ ಭಾಗದಎಲ್ಲ ಏಳು ಜಿಲ್ಲೆಗಳ ಅಭಿವೃದ್ಧಿಕುರಿತಂತೆಇದೇಜೂನ್ 14ರಂದು ಬೆಳಗ್ಗೆ 9ಕ್ಕೆ ಗೃಹ ಕಚೇರಿಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶೀಲನಾ ಸಭೆಕರೆದಿದ್ದಾರೆಎಂದುಕಲ್ಯಾಣಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್‍ಸಿಂಗ್ ಹೇಳಿದರು.
ಕೆಕೆಆರ್‍ಡಿಬಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದಅವರು, ಕಲ್ಯಾಣಕರ್ನಾಟಕ ಭಾಗದಎಲ್ಲ ಸಚಿವರು, ಶಾಸಕರು ಮತ್ತುಕೆಕೆಆರ್‍ಡಿಬಿ ಕಾರ್ಯದರ್ಶಿ, ಯೋಜನಾ ಕಾರ್ಯದರ್ಶಿಗಳ ಜೊತೆ ಈ ಸಭೆಯಲ್ಲಿ ಕೈಗೊಳ್ಳಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತುಚರ್ಚೆ ನಡೆಸಲಿದ್ದಾರೆಎಂದರು.
ಈಗಾಗಲೇ ರಾಜ್ಯ ಸರಕಾರ ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ರೂ.32 ಸಾವಿರಕೋಟಿಖರ್ಚು ಮಾಡಿದೆ. ಇದರಜೊತೆಗೆಕೆಕೆಆರ್‍ಡಿಬಿ ವತಿಯಿಂದಅಕ್ಷರ ಆವಿಷ್ಕಾರ, ಆರೋಗ್ಯ ಆವಿಷ್ಕಾರ, ಉದ್ಯೋಗ ಆವಿಷ್ಕಾರ, ಎಲ್ಲತಾಲೂಕು ಕೇಂದ್ರಗಳಲ್ಲಿ ಮಿನಿ ವಿಧಾನಸೌಧಗಳ ನಿರ್ಮಾಣ, ಆರೋಗ್ಯ ಸೌಧ ನಿರ್ಮಾಣಕ್ಕಾಗಿಅಗತ್ಯಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಲ್ಯಾಣಕರ್ನಾಟಕ ಭಾಗದಅಭಿವೃದ್ಧಿಗಾಗಿಇದುವರೆಗೆ ವಾರ್ಷಿಕ ರೂ.3000 ಕೋಟಿಅನುದಾನ ಬರುತ್ತಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಇದೇಆರ್ಥಿಕ ವರ್ಷದಿಂದ ರೂ.5000 ಕೋಟಿಅನುದಾನ ನೀಡುವ ವಾಡಿಕೆರೂಢಿಗೆತಂದಿದ್ದಾರೆ. ಮೇಲಾಗಿ, ಇತ್ತೀಚೆಗೆ ನಡೆದ ಲೋಕಸಭಾಚುನಾವಣೆಯಲ್ಲಿಕಲ್ಯಾಣಕರ್ನಾಟಕ ಭಾಗದಎಲ್ಲಐದು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಈ ಭಾಗದಅಭಿವೃದ್ಧಿಗೆ ಮುಖ್ಯಮಂತ್ರಿಗಳು ಬದ್ಧರಾಗಿದ್ದಾರೆಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಭಾಗದಲ್ಲಿ 17 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿಯಿದ್ದುಈ ನಿಟ್ಟಿನಲ್ಲಿ ಮಂಡಳಿ ವತಿಯಿಂದಅಕ್ಷರ ಆವಿಷ್ಕಾರಯೋಜನೆಅಡಿಯಲ್ಲಿಅತಿಥಿ ಶಿಕ್ಷಕರನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ. ಹಾಗಾಗಿ, ಆದಷ್ಟು ಬೇಗ ಶಿಕ್ಷಕರ ನೇಮಕಾತಿ ಪ್ರಕ್ರಿಯೆಕೈಗೊಂಡು ಈ ಭಾಗದ ಶಿಕ್ಷಕರ ಕೊರತೆ ನೀಗಿಸಬೇಕೆಂದು ಮುಖ್ಯಮಂತ್ರಿಗಳನ್ನು ಕೋರಲಾಗುವುದುಎಂದು ತಿಳಿಸಿದರು.
ಇತ್ತೀಚೆಗೆ ನಡೆದ ಲೋಕಸಭಾಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟದ ನಾಯಕತ್ವ ವಹಿಸಿಕೊಂಡಿರುವ ಕಾಂಗ್ರೆಸ್‍ಉತ್ತಮ ಸಾಧನೆ ಮಾಡಿದೆ. ಅದರಲ್ಲೂ ಮುಖ್ಯವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ರಾಹುಲ್‍ಗಾಂಧಿ, ಪ್ರಿಯಾಂಕಾಗಾಂಧಿ ಮತ್ತು ಸೋನಿಯಾಗಾಂಧಿಯವರ ನಾಯಕತ್ವವನ್ನುಜನರುಒಪ್ಪಿಕೊಂಡಿದ್ದಾರೆಎಂಬುದನ್ನುಚುನಾವಣಾ ಫಲಿತಾಂಶ ಸಾಬೀತುಪಡಿಸಿದೆ. ಅದರಲ್ಲೂಗ್ರಾಮೀಣ ಭಾಗದಲ್ಲಿಕಾಂಗ್ರೆಸ್ ಪರವಾದಅಲೆಯಿದೆಎಂದು ಮತ್ತೊಮ್ಮೆಜಾಹೀರಾಗಿದೆಎಂದು ಡಾ.ಅಜಯ್‍ಸಿಂಗ್ ನುಡಿದರು.
ಕೇಂದ್ರದ ವಿದ್ಯಮಾನಗಳ ಕುರಿತು ಪ್ರಸ್ತಾಪಿಸಿದ ಡಾ.ಅಜಯ್‍ಸಿಂಗ್ ಎಕ್ಸಿಟ್ ಪೋಲ್ ಹೆಸರಿನಲ್ಲಿಜನರನ್ನು ಸುಲಿಯುವ ಕೆಲಸವನ್ನುಕೇಂದ್ರ ಸರಕಾರ ಮಾಡಿದೆ. ಅದರಲ್ಲೂ ಫಲಿತಾಂಶಕ್ಕೆ ಕೇವಲ ಎರಡು ದಿನ ಬಾಕಿ ಇರುವಾಗಎಕ್ಸಿಟ್ ಪೋಲ್ ಪ್ರಕಟಿಸುವ ಮೂಲಕ ಜನರು ಷೇರು ಮಾರುಕಟ್ಟೆಯಲ್ಲಿ ಲಕ್ಷಾಂತರಕೋಟಿರೂ. ವಿನಿಯೋಗಿಸುವಂತೆಖುದ್ದು ಗೃಹ ಸಚಿವಅಮಿತ್ ಶಾ ಕರೆ ನೀಡಿದಕಾರಣ30 ಲಕ್ಷಕೋಟಿರೂ. ನಷ್ಟ ಉಂಟಾಗಿದೆ. ನೇರವಾಗಿಅದಾನಿ ಮತ್ತುಅಂಬಾನಿಯಂತಹ ಪ್ರತಿಷ್ಠಿತ ಕುಟುಂಬಗಳಿಗೆ ಅನುಕೂಲ ಮಾಡಿಕೊಡಲುಇಂತಹ ಸಂಚು ರೂಪಿಸಲಾಗಿತ್ತುಎಂದುಖುದ್ದುರಾಹುಲ್‍ಗಾಂಧಿ ಟೀಕಿಸಿದ್ದಾರೆ. ಈ ಕುರಿತು ಸಮಗ್ರತನಿಖೆ ನಡೆಯಬೇಕೆಂದು ಅಜಯ್‍ಸಿಂಗ್ ಒತ್ತಾಯಿಸಿದರು.
ನೀಟ್ ಪರೀಕ್ಷೆಯಲ್ಲೂ ವ್ಯಾಪಕಅವ್ಯವಹಾರ ನಡೆದಿದೆ. ಈ ಬಗ್ಗೆ ತಮಿಳುನಾಡು ಮಾದರಿಯಲ್ಲಿರಾಜ್ಯಮಟ್ಟದ ನೀಟ್ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಪರಿಶೀಲನೆ ನಡೆಸುವ ಸಾಧ್ಯತೆಯಿದೆಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತಾಡಾ.ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
ಜೂ.28ರಂದು ಕೆಕೆಆರ್‍ಡಿಬಿ ಸಭೆ
ಕಲ್ಯಾಣಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಎಲ್ಲ ಜಿಲ್ಲೆಗಳ ಅಭಿವೃದ್ಧಿಕುರಿತುಚರ್ಚಿಸಲುಇದೇ ಜೂ.28ರಂದು ಮಂಡಳಿ ಸಭೆಕರೆಯಲಾಗುವುದುಎಂದುಅಧ್ಯಕ್ಷ ಡಾ.ಅಜಯ್‍ಸಿಂಗ್ ತಿಳಿಸಿದರು.
ಮಂಡಳಿ ವ್ಯಾಪ್ತಿಯಎಲ್ಲ ಶಾಸಕರುತಮ್ಮ ಕ್ಷೇತ್ರಗಳಲ್ಲಿ ಕೈಗೊಳ್ಳಬೇಕಿರುವ ಅಭಿವೃದ್ಧಿಕುರಿತಂತೆ ಮುಂದಿನ 15 ದಿನಗಳಲ್ಲಿ ಕ್ರಿಯಾಯೋಜನೆ ಸಲ್ಲಿಸುವಂತೆಕೋರಲಾಗುವುದು. ಹೀಗೊಮ್ಮೆಕ್ರಿಯಾಯೋಜನೆ ಸಲ್ಲಿಸಿದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿಯಕುರಿತುಸಭೆಯಲ್ಲಿಚರ್ಚಿಸಲು ಅನುಕೂಲವಾಗುತ್ತದೆಎಂದರು.
ಬಿಡುಗಡೆಗೊಂಡ ರೂ.3000 ಕೋಟಿ ಪೈಕಿ ಕಳೆದ ಆಗಸ್ಟ್‍ವರೆಗೆ ರೂ.2900 ಕೋಟಿಅನುದಾನಖರ್ಚಾಗಿದೆ. ಮುಂದಿನ ಮೂರು ತಿಂಗಳಲ್ಲಿ ಖರ್ಚು ರೂ.3000 ಕೋಟಿತಲುಪುವ ಸಾಧ್ಯತೆಯಿದೆಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಸ್ಥಾನ: ವರಿಷ್ಠರ ನಿರ್ಧಾರಕ್ಕೆ ಬದ್ಧ
ಲೋಕಸಭಾಚುನಾವಣೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿರಾಜ್ಯ ಸಚಿವ ಸಂಪುಟಏನಾದರೂ ವಿಸ್ತರಣೆಗೊಂಡರೆತಮಗೆಸಚಿವ ಸ್ಥಾನ ನೀಡುವಕುರಿತುಕಾಂಗ್ರೆಸ್ ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆತಾವು ಬದ್ಧಎಂದು ಡಾ.ಅಜಯ್‍ಸಿಂಗ್ ಸ್ಪಷ್ಟಪಡಿಸಿದರು.
ವರಿಷ್ಠರುಯಾವುದೇಜವಾಬ್ದಾರಿವಹಿಸಿದರೂ ಅದನ್ನುಅತ್ಯಂತ ಬದ್ಧತೆಯಿಂದ ನಿರ್ವಹಿಸುವುದಾಗಿ ಹೇಳಿದ ಅವರು, ವರಿಷ್ಠರುಯಾವುದೇಜವಾಬ್ದಾರಿ ನೀಡಿದರೂ ವಹಿಸಿಕೊಳ್ಳಲು ಸಿದ್ದ ಎಂದರು.