ಮಾದಿಗ ಸಮಾಜಕ್ಕೆ ಸಚಿವ ಸ್ಥಾನ ನೀಡದಿದ್ದರೆ ತಕ್ಕ ಪಾಠ: ಮಾದಿಗ ಸಮಾಜದ ಮುಖಂಡರ ಎಚ್ಚರಿಕೆ
ವಿಜಯಪುರ, ಜೂ.12:ಮಾದಿಗ ಸಮಾಜದ ಧುರೀಣ ಹಾಗೂ ಹಿರಿಯ ಸಂಸದ ರಮೇಶ ಜಿಗಜಿಣಗಿ ಅವರಿಗೆ ಸಚಿವ ಸ್ಥಾನ ನೀಡಲು ಮಾದಿಗ ಸಮಾಜದ ಮುಖಂಡರು ಒತ್ತಾಯಿಸಿದರು.
ಮಾದಿಗ ಸಮಾಜದ ಮುಖಂಡರಾದ ಹನಮಂತ ಬಿರಾದಾರ, ಶರಣು ಬ್ಯಾಳಿ, ಪರಶುರಾಮ ರೋಣಿಹಾಳ, ಸದಾನಂದ ಗುನ್ನಾಪೂರ ಸೇರಿದಂತೆ ಅನೇಕ ಮುಖಂಡರು ಪತ್ರಿಕಾಗೋಷ್ಠಿ ಆಗ್ರಹಿಸಿದರು.
ದಲಿತ ಖೋಟಾದಡಿ ರಾಜ್ಯದಲ್ಲಿ ಇಬ್ಬರು ಮಾತ್ರ ಆಯ್ಕೆಯಾಗಿದ್ದಾರೆ. ಒಬ್ಬರಿಗೂ ಸಚಿವ ಸ್ಥಾನ ನೀಡಿಲ್ಲ. ಮಾದಿಗ ಸಮಾಜವನ್ನು ಕಡೆಗಣಿಸಿದ್ದು ಮಾದಿಗ ಸಮಾಜಕ್ಕೆ ತುಂಬಾ ನೋವು ಉಂಟಾಗಿದೆ ಎಂದರು.
ಜಿಗಜಿಣಗಿ ಅವರು ಸಥ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ ರಾಜ್ಯದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿದ್ದವರು. ಸಾಕಷ್ಟು ಅನುಭವಿಕರು. ಆದ್ದರಿಂದ ರಮೇಶ ಜಿಗಜಿಣಗಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹೇಳಿದರು.
ಜಿಗಜಿಣಗಿ ಅವರು ಅತ್ಯಂತ ಹಿರಿಯ ಸಂಸದರು ಅವರಿಗೆ ಉಪ ಪ್ರಧಾನಿ ಹುದ್ದೆ ನೀಡಬೇಕು. ಗೋವಿಂದ ಕಾರಜೋಳ ಅವರಿಗೆ ರಾಜ್ಯ ಸಚಿವ ಖಾತೆ ನೀಡಬೇಕು ಎಂದೂ ಅವರು ಒತ್ತಾಯಿಸಿದರು.
ಒಂದೊಮ್ಮೆ ನಮ್ಮ ಸಮಾಜಕ್ಕೆ ಸಚಿವ ಸ್ಥಾನ ನೀಡದಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ವರಿಷ್ಠರು ಈ ಬಗ್ಗೆ ಗಮನ ಹರಿಸಿ ಮಾದಿಗ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಕೇಳಿಕೊಂಡರು.