ಮತ್ತೆ ನರೇಂದ್ರ ಮೋದಿ ಪ್ರಧಾನಿ ಯಾಗಿ ಆಯ್ಕೆಯಾಗಿದ್ದಕ್ಕೆ ದೀರ್ಘದಂಡ ನಮಸ್ಕಾರ ಹಾಕಿದ ಅಭಿಮಾನಿ ಯಲ್ಲಾಲಿಂಗ ಗುಜ್ಜಲಕರ್
ದೇವರಹಿಪ್ಪರಗಿ: ಜೂ.12:ಮೂರನೇ ಬಾರಿ ಮತ್ತೆ ನರೇಂದ್ರ ಮೋದಿ ಪ್ರಧಾನಿ ಆಗಬೇಕೆಂಬೇಕೆಂದು ಮನೆಯಿಂದ ಮಲ್ಲಿಕಾರ್ಜುನ ದೇವಸ್ಥಾನದ ವರೆಗೆ ದೀರ್ಘದಂಡ ನಮಸ್ಕಾರ ಹಾಕುವ ಹರಕೆ ಹೊತ್ತಿದ್ದ ಬಿಜೆಪಿ ಅಭಿಮಾನಿ ಯುವಕ ಯಲ್ಲಾಲಿಂಗ. ಪ. ಗುಜ್ಜಲಕರ ಜೂ.11ರಂದು ಹರಕೆ ತೀರಿಸಿದ್ದಾನೆ.
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದ ಬಿಜೆಪಿ ಪಕ್ಷದ ಅಭಿಮಾನಿ ಯಲ್ಲಾಲಿಂಗ ಗುಜ್ಜಲಕರ್ 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ.ದೇಶದ ಅಭಿವೃದ್ಧಿಗಾಗಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಉದ್ದೆ?ಶದಿಂದ ಹರಕೆ ಹೊತ್ತಿದ್ದೆ? ನನ್ನ ಬಯಕೆ ಈಡೇರಿದೆ ಎಂದು ದೀರ್ಘ ದಂಡ ನಮಸ್ಕಾರ ಹಾಕುತ್ತ ತೆರಳಿ ನಂತರ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪೂಜೆ ಮಾಡಿ ದೇವರ ದರ್ಶನ ಪಡೆದರು.
ಈ ವೇಳೆ ಬಿಜೆಪಿ ಕಾರ್ಯಕರ್ತರಾದ ಮಹಾಂತೇಶ ಬಿರಾದರ,ಪ್ರಕಾಶ ಡೊಣರಮಠ, ಶಿವರಾಜ ತಳವಾರ,ವಿಶ್ವಾನಾಥ ವಂದಾಲಮಠ, ಸುರೇಶ ಗೋನಾಳ, ಜಗು ಸರ್ ತಡಕಲ್,ಮಲ್ಲು ಮಾವಿನಗಿಡದ, ಗುಜ್ಜಲಕರ್ ಕುಟುಂಬಸ್ಥರು, ಬಿಜೆಪಿ ಯುವ ಕಾರ್ಯಕರ್ತರು ಭಾಗಿಯಾಗಿದ್ದರು.
ಭಾರತ ದೇಶಕ್ಕೆ ನರೇಂದ್ರ ಮೋದಿ ಆಡಳಿತ ಅತಿ ಅವಶ್ಯಕವಾಗಿದೆ. ಪ್ರಸ್ತುತ ಈ ಕಲಿಯುಗದಲ್ಲಿ ಭಾರತ ದೇಶಕ್ಕೆ ಅತ್ಯ ಅವಶ್ಯಕ ಕೊಡುಗೆಗಳು ನೀಡಿದ್ದಾರೆ.ಜಿಲ್ಲೆ,ರಾಜ್ಯ ಹಾಗೂ ದೇಶಾದ್ಯಂತ ವಿದ್ಯುತ್ ಸೌಲಭ್ಯ 24 ಘಂಟೆ ನರೇಂದ್ರ ಮೋದಿ ಸರಕಾರ ನೀಡಿದೆ.ರೈತರಿಗೆ ಪಿ ಎಂ ಕಿಸಾನ್ ಯೋಜನೆ,ಬಡ ಕುಟುಂಬಗಳಿಗೆ ಪಿ ಎಂ ಆವಾಸ್ ಯೋಜನೆ, ಗ್ಯಾಸ್ ಪ್ರಿ ನೀಡಿದ್ದಾರೆ.ಭಾರತದ ಸೈನಿಕರಿಗೆ ಅನುಕೂಲ ಮಾಡಿದ್ದಾರೆ. ಎಂದ ಪಿಜೆಪಿ ಪಕ್ಷದ ಅಭಿಮಾನಿ ಯಲ್ಲಾಲಿಂಗ ಗುಜ್ಜಲಕರ್.