ಬೀದರಗೆ ಮೊದಲಿನಂತೆ ಹೆಚ್ಚಿನ ಸಹಕಾರ ನೀಡಬೇಕು: ಭಗವಂತ ಖೂಬಾ
ಬೀದರ:ಜೂ.12:ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಚಿವ ಸಂಪುಟದ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಇಲಾಖೆಗಳ ರಾಜ್ಯ ಸಚಿವರಾದ ವಿ. ಸೋಮಣ್ಣನವರಿಗೆ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಭೇಟಿಯಾಗಿ ಶುಭ ಕೋರಿ. ಕಳೆದ ಹತ್ತು ವರ್ಷಗಳಲ್ಲಿ ರೈಲ್ವೆ ಇಲಾಖೆಯಿಂದ ಸಾಕಷ್ಟು ಅನುಕೂಲಗಳು ನಮ್ಮ ಜನರಿಗೆ ಆಗಿವೆ ಆದರೂ ಇನ್ನು ಹೆಚ್ಚಿನ ಸಹಕಾರ ನಮ್ಮ ಬೀದರ ಲೋಕಸಭಾ ಕ್ಷೇತ್ರಕ್ಕೆ ನೀಡಬೇಕೆಂದು ಮನವಿ ಮಾಡಿದರು.