ದೇಶದ ಪ್ರಗತಿಗೆ ಎಚ್‍ಡಿಕೆ ಶ್ರಮಿಸಲಿದ್ದಾರೆ: ಪರೆಪ್ಪ
ಬಸವಕಲ್ಯಾಣ: ಜೂ.12:ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿ ಅವರ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ದೇಶದಲ್ಲಿ ಉತ್ತಮ ಕಾರ್ಯ ಮಾಡಲಿದ್ದಾರೆ ಎಂದು ಜೆಡಿಎಸ್ ಪಕ್ಷದ ಮಾಜಿ ತಾಲೂಕು ಉಪಾಧ್ಯಕ್ಷ ಶರಣಪ್ಪ ಪರೆಪ್ಪ ತಿಳಿಸಿದ್ದಾರೆ.
ಕೇಂದ್ರದಲ್ಲಿ ಎನ್‍ಡಿಎ ಮೈತ್ರಿ ಕೂಟದ ಸಂಪುಟ ದರ್ಜೆಯ ಸಚಿವರಾಗಿರುವ ಎಚ್‍ಡಿಕೆ ಅವರು ದೇಶ ಅಭಿವೃದ್ದಿ ಮಾಡುವ ಗುರಿ ಹೊಂದಿದ್ದಾರೆ. ಅಲ್ಲದೆ ಅವರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಉತ್ತಮವಾದ ಆಡಳಿತ ನೀಡಿದ ಅನುಭವ ಹೊಂದಿದ್ದಾರೆ ಹೀಗಾಗಿ ಅವರಿಗೆ ನೀಡಿದ ಖಾತೆಯಲ್ಲಿ ಉತ್ತಮವಾಗಿ ಕೆಲಸ ಮಾಡುವ ಮೂಲಕ ರಾಜ್ಯ ಸೇರಿದಂತೆ ದೇಶದ ಪ್ರಗತಿಗೆ ಶ್ರಮಿಸಲಿದ್ದಾರೆ ಎಂದು ಪರೆಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.