ರೈತರ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ:ಜಿಲ್ಲಾ ರೈತ ಸಂಘ
ಬೀದರ :ಜೂ.12:ಜಿಲ್ಲೆಯು ಬರಗಾಲಕ್ಕೆ ತುತ್ತಾಗಿ ರೈತರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ ಇಂತಹ ಸಮಯದಲ್ಲಿ ರಾಜ್ಯ ಸರ್ಕಾರವು ಇಡಿ ಬೀದರ ಜೀಲ್ಲೆ ಬರಗಾಲ ಎಂದು ಘೊಷಣೆ ಮಾಡಿದೆ ಆದರೆ ಸರ್ಕಾರವು ಬರ ಪರಿಹಾರ ಕೊಡುವಲ್ಲಿ ರೈತರಿಗೆ ತಾರತಮ್ಯ ಮಾಡಿದೆ ಬಹಳಷ್ಟು ರೈತರಿಗೆ ಬರ ಪರಿಹಾರ ಬಂದಿಲ್ಲಾ ಎಕೆ?
ಸತತವಾಗಿ ರಾಜ್ಯದ ರೈತರು ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಸಿಲುಕುತ್ತಿದ್ದಾರೆ ಇದು ಅತ್ಯಂತ ಗಂಭಿರವಾದ ವಿಷಯವಾಗಿದೆ
ಒಂದು ಕಡೆ ಬರಗಾಲ ಘೊಷಣೆ ಮಾಡಿ ಅವರಿಗೆ ಎನ್ ಡಿ ಆರ್ ಎಫ್ ಹಣ ಬಂದರು ಸಹ ಎಲ್ಲಾ ರೈತರಿಗೆ ಎಕೆ ಹಣ ಕೊಟ್ಟಿಲ್ಲ? ಇನ್ನೊಂದು ಕಡೆ ಎಸ್ ಡಿ ಆರ್ ಎಫ್ ರಾಜ್ಯದ ಪಾಲಿನ ಹಣ ರೈತರಿಗೆ ಎಕೆ ಕೊಡುತ್ತಿಲ್ಲ ಕೇಂದ್ರ ಸರಕಾರದ ಜೋತೆ ರಾಜ್ಯ ಸರಕಾರದ ಹಣವು ಸಹ ಕೊಡಬೆಕು. ಎಕೆ ರಾಜ್ಯ ಸರಕಾರವು ತನ್ನ ಪಾಲಿನ ಬರ ಪರಿಹಾರ ರೈತರಿಗೆ ಕೊಡುತ್ತಿಲ್ಲ ಕೂಡಲೆ ಕೇಂದ್ರ ಸರಕಾರದ ಬರ ಪರಿಹಾರದ ಜೊತೆಗೆ ರಾಜ್ಯ ಸರಕಾರವು ಎಸ್ ಡಿ ಆರ್ ಎಫ್ ತನ್ನ ಹಣವನ್ನು ಸಹ ಕೂಡಲೆ ಎಲ್ಲಾ ರೈತರಿಗೆ ಬರ ಪರಿಹಾರ ಕೊಡಬೇಕು ಇದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ.
ರಾಜ್ಯ ಸರಕಾರು ಮಾತೆತ್ತಿದ್ದರೆ ರ್ಯತರ ಪರ ನಾವಿದ್ದೆವೆಎಂದು ಹೇಳುತ್ತಿರಿ ಇನ್ನೊಂದು ಕಡೆ ರೈತರಿಗೆ ಬರದ ಮೇಲೆ ಬರೆಯನ್ನು ಎಳುವಂತೆ ಮಾಡುತ್ತಿದ್ದಿರಿ ಇದು ಸರಿ ಇಲ್ಲಾ ರೈತರಿಗೆ ಬರಗಾಲದ ಸಮಯದಲ್ಲಿ ಬಿತ್ತನೆ ಬಿಜ ಫ್ರಿ ಆಗಿ ಕೊಡಬೇಕು ಅದನ್ನು ಬಿಟ್ಟು ಕಳೆದ ಸಾಲಿನಿಗಿಂತ ಇ ಸಲ ಬೀಜದ ಬೇಲೆಯನ್ನು ಶೆ 70% ರಷ್ಟು ಏರಿಕೆ ಮಾಡಿದು ಇದು ಯಾವ ನ್ಯಾಯ? ಕೂಡಲೆ ಬಿತ್ತನೆ ಬಿಜವನ್ನು ಶೆ 75% ರಿಯಾಯಿತಿ ಘೊಷಣೆ ಮಾಡಿ ರೈತರಿಗೆ ಜಾತಿ ಆಧಾರಿತ ಬಿಜವನ್ನು ಕೊಡದೆ ಕೃಷಿಯೆ ಒಂದು ಜಾತಿಎಂದು ಪರಿಗಣಿಸಿ ಎಲ್ಲಾ ರೈತರಿಗೆ ಒಂದೆ ರಿಯಾಯಿತಿ ದರದಲ್ಲಿ ಬಿಜವನ್ನು ಕೊಟ್ಟು ಕೃಷಿಮಾಡುವ ರೈತರಿ ನೆರವಾಗಬೇಕು.
ಕಾರ್ಖಾನೆಗಳು ಕಬ್ಬು ಪುರೈಸಿದ ರೈರಿಗೆ 15 ದಿವಸದೊಳಗಾಗಿ ಹಣ ಪಾವತಿಸುವ ನಿಯಮವಿದೆ ಇದನ್ನು ಮಿರಿದರೆ ರೈತರಿಗೆ ಸರ್ಕಾರದ ನಿಯಮದಂತೆ 14% ಬಡ್ಡಿ ಸಹಿತ ಹಣವನ್ನು ಕೊಡಿಸಬೇಕು
ರೈತನು ನಿಗದಿತ ಸಮಯಕ್ಕೆ ಬ್ಯಾಂಕಿಗೆ ಹಣವನ್ನು ಕಟ್ಟದಿದ್ದರೆ ಅವನಿಂದ ಬಡ್ಡಿ ಚಕ್ರ ಬಡ್ಡಿ ಸಹಿತ ವಸುಲಿ ಮಾಡುತ್ತವೆ ಸರಕಾರದ ಬಡ್ಡಿ ಮನ್ನಾಕ್ಕೆ ಅರ್ಹರಾಗಿರುವುದಿಲ್ಲ ಇದು ಯಾವ ನಿತಿ.
ಕೂಡಲೆ ಸರಕಾರವು ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ರೈತರಿಗೆ ನ್ಯಾಯವನ್ನು ಒದಗಿಸಿ ಕೊಡಬೇಕು.
ಬೀದರ ಜೀಲ್ಲೆಯ ನಮ್ಮ ಜೀಲ್ಲಾ ಎಲ್ಲಾ ಶಾಸಕರು ಮತ್ತು ಮಂತ್ರಿಗಳು ನಮ್ಮ ಜೀಲ್ಲೆ ರೈತರ ಮೇಲೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಕಾರ್ಖಾನೆಗಳಿಂದ ಹಣ ಕೊಡಿಸಬೇಕು.
ಬರ ಪರಿಹಾರ ಬೇಳೆ ವಿಮೆ ಹಣವನ್ನು ಕೂಡಲೆ ಕೊಡಿಸಬೇಕು ಮತ್ತು ಬ್ಯಾಂಕ ಮತ್ತು ಸಹಕಾರಿ ಬ್ಯಾಂಕಗಳಿಂದ ರೈತರಿಗೆ ನೊಟಿಸಕೊಡುವುದನ್ನು ಮನೆಗೆ ವಸುಲಿಗೆ ಬಂದು ಕಿರುಕುಳವನ್ನು ಕೊಡವದನ್ನು ನಿಲ್ಲಿಸಬೇಕು.
ಕಾಡು ಪ್ರಾಣಿಗಳಿಂದ ಬೇಳೆಗಳು ಹಾಳಾಗುತ್ತಿದ್ದು ಅಂತಹ ಬಡ ರೈತರ ವೈಜ್ಞಾಣಿಕ ಬೇಳೆ ಪರಿಹಾರ ಕೊಡಬೆಕು. ಜೀಲ್ಲೆಯಲ್ಲಿ ಕಬ್ಬು ಪುರೈಸಿದ ರೈತರಿಹೆ ಹತ್ತು ತಿಂಗಳಾದರು ಇಲ್ಲಿವರೆಗೆ ಕೆಲವಂದು ಕಾರ್ಖಾನೆಗಳು ರೈತರಿಗೆ ಇನ್ನು ಹಣ ಪಾವತಿ ಮಾಡಿಲ್ಲ ಎಕೆ? ಅನೆಕ ಸಾರಿ ಸರ್ಕಾರ ಜೀಲ್ಲಾಧಿಕಾರಿ ಕಾರ್ಖಾನೆಗಳಿಗೆ ಎಚ್ಚರಿಕೆಯನ್ನು ಕೊಟ್ಟರು ರೈತರ ಹಣ ಕೊಡುತಿಲ್ಲ. ರಾಜ್ಯದಲ್ಲಿ ಸರ್ಕಾರ ರೈತರ ಪರ ಇದೆಯೆ ಅಥವಾ ಕಾರ್ಖಾನೆಗಳ ಪರ ಇದೆಯೆ ಎಂಬುದನ್ನು ಸ್ಪಷ್ಟ ಪಡಿಸಬೆಕು.ರೈತರಿಗೆ ಬರ ಮತ್ತು ಬೇಳೆ ವಿಮೆಯನ್ನು ಕೂಡಲೆ ಪಾವತಿಸಲು ಕ್ರಮ ಕೈಗೊಳ್ಳಬೇಕು. ಬರ ಪರಿಹಾರಕ್ಕಾಗಿ ರೈತರು ದಿನಾಲು ತಹಸಿಲ ಕಛೆರಿ ಮತ್ತು ಕೃಷಿ ಕಛೆರಿ ತಿರುಗಿಸುವುದನ್ನು ತಪ್ಪಿಸಿ ತಮ್ ಇಲಾಖಾಯಿಂದಲೆ ಪ್ರತಿ ಗ್ರಾಮಕ್ಕೆ ಹೊಗಿ ಯಾವ ರೈತರಿಗೆ ಬರಪರಿಹಾರದ ಹಣವನ್ನು ಸಿಕ್ಕಿಲ್ಲ ಪರಿಷ್ಕರಿಸಿ ಸಮಸ್ಸೆಯನ್ನು ಬಗೆಹರಿಸಬೇಕು. ವಿದ್ಯತ ಇಲಾಖೆಯಿಂದ ಬಡ ರೈತರಿಗೆ ನಿರಾವರಿ ಮಾಡಲು ಹಿಂದಿನ ಸರ್ಕಾರದ ನಿತಿಯಂತೆ ಐ ಪಿ ಸೆಟಗಳಿಗೆ ವಿದ್ಯುತ ಸಂಪರ್ಕ ಕೊಡುವ ವ್ಯವಸ್ಥೆ ಮಾಡಬೇಕು. ಇಗೆ ಜಾರಿಗೆ ತಂದಿರುವ ಸರಕಾರದ ತಪ್ಪು ಕಾನೂನನ್ನು ರದ್ದುಪಡಿಸ ಬೇಕು. ಸಮಸ್ಸೆಯನ್ನು ಕೂಡಲೆ ಬಗೆ ಹರಿಸದೆ ಇದ್ದಲ್ಲಿ ಉಗ್ರ ಹೊರಾಟ ರೂಪಿಸಲಾಗುವುದು ಇದಕ್ಕೆ ಸರಕಾರವೆ ಹೊಣೆ ಜೀಲ್ಲಾಡಳಿತವೆ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿ ಇಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ, ರಾಜ್ಯ ಉಪಾಧ್ಯಕ್ಷ ಖಾಸಿಮ ಅಲಿ ಜಲಸಿಂಗಿ, ವಿಠ್ಠಲರಾವ ಮೆತ್ರೆ, ನಾಗೆಂದ್ರಪ್ಪ ತರಣಳ್ಳಿ, ವಿಠ್ಠಲ ರೆಡ್ಡಿ , ಬಸವರಾಜ ಅಷ್ಟುರ , ರುದ್ರು ಸ್ವಾಮಿ, ಸಂತೊಷ ಗುದಗೆ , ಗುಂಡೆರಾವ ಕುಲಕರ್ಣಿ , ಮೂಖಿಮೊದ್ದದಿನ ಪಟೆಲ, ಕರಬಸಪ್ಪ ಹುಡಗಿ, ಭವರಾವ ನೆಲವಾಡೆ , ಪರಮೆಶ್ವರ ಗೌರ, ಸನ್ಮುಕಮ್ಮ ಅಣದುರ, ಶಿವರಾಜ ಜಲ್ದೆ , ವಿನೊದ ಚಿಂತಾಮಣಿ ಇದ್ದರು.