ಕಲುಷಿತ ನೀರು ಸೇವಿಸಿ ನಾಗರಹಳ್ಳಿ ತಾಂಡಾ 6 ಜನ ಮಕ್ಕಳು ಅಸ್ವಸ್ಥ ಭಯದಲ್ಲಿ ಜೀವನ ಸಾಗಿಸುತ್ತಿರುವ ಸಾರ್ವಜನಿಕರು
ಯಡ್ರಾಮಿ:ಜೂ.12:ಕಲುಷಿತ ಕೊಳವೆ ಬಾವಿಯ ನೀರು ಸೇವನೆ ಮಾಡಿ 6 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ನಾಗಹಳ್ಳಿ ತಾಂಡಾದಲ್ಲಿ ನಡೆದಿದೆ.
ಸತತ ಸುರಿಯುತಿರುವ ಮಳೆಗೆ ಕೊಳಚೆ ನೀರು ಕೊಳವೆ ಬಾವಿಯೂ ನೀರು ಸಂಗ್ರಹವಾಗಿ ಅದನ್ನೇ ತಾಂಡಾದ ಜನರು ಕುಡಿಯುವ ಮೂಲಕ ವಾಂತಿಬೇದಿಯಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಸಿಂದಗಿ ಹಾಗೂ ಕೆಂಭಾವಿ ಆಸ್ಪತ್ರೆಗೆ ದಾಖಲೆಯಾಗಿದ್ದಾರೆ ಎಂದು ಮಕ್ಕಳ ಕುಟುಂಬದ ಸದಸ್ಯರು ತಿಳಿಸಿದ್ದಾರೆ.ಪ್ರಾಣಕ್ಕೆ ಯಾವುದೇ ತರಹ ತೊಂದರೆ ಇಲ್ಲಾ ಎಂದು ತಿಳಿದು ಬಂದಿದೆ.
ಇನ್ನು ಬೆಳಗಿನ ಜಾವವರೆಗೂ ಹಲವಾರು ಜನರು ವಾಂತಿಬೇದಿಯಾಗಿ ಆಸ್ಪತ್ರೆಗೆ ಹೋಗುತ್ತಿದ್ದು.ತಕ್ಷಣ ಆಡಳಿತ ಮತ್ತು ಪಂಚಾಯತಿ ಅಧಿಕಾರಿಗಳು ಈಗಾಗಲೇ ಕೊಳೆಬಾವಿಯ ನೀರು ನಿಲ್ಲಿಸಿದ್ದಾರೆ.
ಕ್ಷೇತ್ರದ ಶಾಸಕ ಡಾ.ಅಜಯಸಿಂಗ್ ಮಾಹಿತಿ ತಿಳಿದ ತಕ್ಷಣ ಪಂಚಾಯತಿ ಅಧಿಕಾರಿಗಳಿಗೆ ಮತ್ತು ಆರೋಗ್ಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು.ಸೂಕ್ತ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದಾರೆ.
ನಾಗರಹಳ್ಳಿ ಗ್ರಾಮದ ತಾಂಡಾದ ಮಕ್ಕಳು ನೀರು ಕುಡಿದು ಅಸ್ವಸ್ಥರಾಗಿದ್ದಾರೆ ಎಂದು ಗಮನಕ್ಕೆ ಬಂದ ತಕ್ಷಣ ಆರೋಗ್ಯ ಮತ್ತು ಪಂಚಾಯತಿ ಅಧಿಕಾರಿಗಳ ಜೋತೆಗೆ ಮಾತನಾಡಿದ್ದು.ಯಾವುದೇ ತೊಂದ್ರೆ ಇಲ್ಲ ಎಂದು ತಿಳಿಸಿದ್ದಾರೆ ನಾನು ಕೂಡ ಬೇಟಿ ನೀಡುತ್ತೆನೆ.
ಮಳೆಗಾಲ ಬಂದ್ರೆ ಸಾಕು ನಮ್ಮ ತಾಂಡಾದ ಕೊಳವೆಬಾವಿ ಚರಂಡಿಯ ಹತ್ತಿರ ಇದ್ದು.ಕಲುಷಿತ ನೀರು ಬರತ್ತಿದ್ದು.ಈಗಾಗಲೇ ಆರೂ ಮಕ್ಕಳು ಅಸ್ವಸ್ಥರಾಗಿದ್ದಾರೆ ಮುಂದೆ ಈ ರೀತಿಯಾಗಿ ಮರುಕಳಿಸದ ಹಾಗೆ ಆಗಬೇಕು.
-ಭೀಮು ಚವ್ಹಾಣ ನಾಗಹಳ್ಳಿ ತಾಂಡಾ ನಿವಾಸಿ.