ರಾಜಯೋಗ ಸುಖ, ಶಾಂತಿ ಭವನದ ಲೋಕಾರ್ಪಣೆ
ಬೀದರ್:ಜೂ.12:ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ರಾಮನಗರ ನೂತನ ರಾಜಯೋಗ ಸುಖ ಶಾಂತಿ ಭವನದ ಲೋಕಾರ್ಪಣಾ ಸಮಾರಂಭ ದಲ್ಲಿ ದೀಪವನ್ನು ಬೆಳಗಿಸಿ ಉದ್ಘಾಟಕರಾಗಿ ಬ್ರ.ಕು.ಬಸವರಾಜ ನಿರ್ದೇಶಕರು ಹುಬ್ಬಳ್ಳಿ ವಲಯ ಅವರ ಲಿಖಿತ್ ಸಂದೇಶ್ ನಿರ್ಮಲಾ ಹುಬ್ಬಳ್ಳಿ ವಲಯ ಸಂಚಾಲಕಿ ಓದಿ ಹೇಳಿದರು.
ಶ್ರೀ ಬ್ರಹ್ಮಾನಂದ ಯೋಗಿ ಪತಂಜಲಿ ಯೋಗ ಪೀಠ ಹರಿದ್ವಾರ್ ಗೋಕಾಕ್ ಶಾಖೆ ಅವರು ಪತಂಜಲಿ ಯೋಗದ ಮಹತ್ವ ತಿಳಿಸಿದರು.
ರೋಹಿಣಿ ಬಸಾಪುರ್ ನ್ಯಾಯಾಧೀಶರು ದಾಂಡೇಲಿ ಇವರು “ಕಾನೂನ ಬಗ್ಗೆ ಮಾತನಾಡುತ್ತಾ ದಿನನಿತ್ಯ ಮೋಸ ,ಕೊಲೆ ದರೋಡೆ ಅಪರಾಧಗಳು ಬೆಳೆಯುತ್ತಿದೆ. ಸಮಾಜದಲ್ಲಿ ಶಾಂತಿ ಸ್ಥಾಪನೆ ಆಗಬೇಕು. ಅಪರಾಧಗಳು ಕಡಿಮೆ ಮಾಡಲು ಈಶ್ವರೀಯ ವಿಶ್ವವಿದ್ಯಾಲಯ ನೈತಿಕ ಮೌಲ್ಯ ಮತ್ತು ರಾಜಯೋಗ ಶಿಕ್ಷಣವನ್ನು ನೀಡಿ ಒಳ್ಳೆ ಸಮಾಜದ ನಿರ್ಮಾಣ ಮಾಡುತ್ತಿದೆ”. ಎಂದು ತಿಳಿಸಿದರು.
ಹುಬ್ಬಳ್ಳಿ ವಲಯ ಸಂಚಾರಕಿ ಬ್ರ. ಕು. ನಿರ್ಮಲ.ಅವರು ಅಧ್ಯಕ್ಷರಾಗಿ ಮಾತನಾಡುತ್ತಾ “ಸಂಸ್ಥೆಯು 140 ರಾಷ್ಟ್ರ ರಾಷ್ಟ್ರಗಳಲ್ಲಿ 87 ವರ್ಷಗಳಿಂದ ಆಧ್ಯಾತ್ಮಿಕ ಸೇವೆ ಮಾಡುತ್ತಿದ್ದು ಇದು ಭಗವಂತ ಸ್ಥಾಪನೆ ಮಾಡಿರುವ ಮಹಿಳೆಯರು ನಡೆಸುವ ಏಕಮೇವ ಸಂಸ್ಥೆಯಾಗಿದೆ.
ಮನ ಮನೆ ಮನಸು ಪರಿವರ್ತನೆ ಮಾಡುವ ಕಾರ್ಯ ಶ್ಲಾಘನಿಯವಾಗಿದೆ. ರಾಮನಗರದಲ್ಲಿ ನಿರಾಕಾರ ರಾಮನು ಹೇಳುವ ಜ್ಞಾನ ನೂತನ ರಾಜಯೋಗ ಕೇಂದ್ರದಿಂದ ಎಲ್ಲರೂ ಉಚಿತವಾಗಿ ಪಡೆಯಬೇಕು” ಎಂದು ಹೇಳಿದರು.
“ಇಂದು ಸಮಾಜದಲ್ಲಿ ಅಪರಾಧಗಳು ಜಾಸ್ತಿಯಾಗಿದೆ ಅದನ್ನು ತಡೆಗಟ್ಟಲು ಪೆÇಲೀಸ್ ಇಲಾಖೆ ನಿಷ್ಠಾವಂತ ಪ್ರಯತ್ನ ಮಾಡುತ್ತಿದೆ “ಎಂದು ಬಸವರಾಜ್ ಎನ್.ಎಂ. ಪೆÇೀಲಿಸ್ ಸಬ್ ಇನ್ಸ್ಪೆಕ್ಟರ್ , ರಾಮನಗರ ಹೇಳಿದರು. ಮುಂದೆವರೆದ ಮಾತನಾಡುತ್ತಾ ಅವರು” ಸೈಬರ್ ಅಪರಾಧಗಳಿಂದ ನಾವು ಸುರಕ್ಷಿತವಾಗಿರಬೇಕು ಯಾವುದೇ ಅಪರಿಚಿತ ಕರೆಗಳಿಗೆ ಉತ್ತರ ನೀಡಬಾರದು. ಅಂತಹ ಯಾವುದೇ ಘಟನೆ ನಡೆದರೆ ತಕ್ಷಣ ಪೆÇಲೀಸ್ ಇಲಾಖೆಗೆ ತಿಳಿಸಬೇಕು” ಎಂದು ಒತ್ತಿ ಹೇಳಿದರು.
ಅಖಂಡ ಬ್ರಹ್ಮಚಾರಿಯಾಗಿರುವ ಡಾ. ವಿದ್ಯಾರಣ್ಯ ಐತಾಳ್ ವೈದ್ಯರು, ಹಳಿಯಾಳ, ಇವರು ಮಾತನಾಡುತ್ತಾ ಐಶ್ವರ್ಯ ವಿಶ್ವವಿದ್ಯಾಲಯದ ಸುಖ ಶಾಂತಿ ಭವನ ವಿಶೇಷವಾಗಿ ರಾಮನಗರದ ನಿವಾಸಿಗಳಿಗೆ ಕಟ್ಟಲಾಗಿದ್ದು ಅದರ ಸದುಪಯೋಗ ಪಡೆದು ಸುಖ ಶಾಂತಿಯನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ. ಡಿ. ವೈ.ಬಸಾಪುರ (ನಿ) ನ್ಯಾಯಾಧೀಶರು ಅಧ್ಯಕ್ಷರು ಜಿಲ್ಲಾ ಗ್ರಾಹಕರ ತ್ಯಾಜ್ಯಗಳ ಪರಿಹಾರ ಬಾಗಲಕೋಟ್,.ಶಿವಾನಂದ ತೋಡಕರ್ ಅರಣ್ಯ ಸೌರಕ್ಷಣಾಧಿಕಾರಿ ಹಾನಗಲ್, ಶಿವಾಜಿ ಗೋಸಾವಿ ಗ್ರಾಮ ಪಂಚಾಯತ್ ಅಧ್ಯಕ್ಷರು ರಾಮನಗರ .ಶ್ರೀಮತಿ ಶ್ರೇಯಾ ಸಾವಂತ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು. ರಾಮನಗರ ಅಂಬರೀಶ್ ರಾಥೋಡ್ ಪೀಡಿಯೋ ಗ್ರಾಮ ಪಂಚಾಯತ. ರಾಮನಗರ, ಶರತ್ ಚಂದ್ರ ಗುರ್ಜರ್ ತಾಲೂಕಾ ಪಂಚಾಯತಿ ಸದಸ್ಯರು ರಾಮನಗರ ಅಂತೋನಿ ಡಿಸೋಜಾ ಪ್ರಾಂಶುಪಾಲರು ಮೌಂಟ್ ಸ್ಕೂಲ್ ರಾಮನಗರ ಮೃತ್ಯುಂಜಯ ಚಂದ್ರಶೇಖರ್ ಹಿರೇಮಠ್ ಟೀಂಬರ್ ಮಚೆರ್ಂಟ್ ಹಾಗೂ ಮಾಜಿ ಅಧ್ಯಕ್ಷರು ಪಟ್ಟಣ ಪಂಚಾಯತ್ ಅಳ್ನಾವರ. ಮುಂತಾದವರು ಶುಭ ಕೋರಿದರು.
ಬ್ರಹ್ಮಕುಮಾರಿ ಸಂಸ್ಥೆಯ ಪರಿಚಯ ಧಾರವಾಡ ಶಾಖೆಯ ಸಂಚಾಲಕಿ ಜಯಂತಿ ಅವರು. ನೀಡುತ್ತಾ “ಇಲ್ಲಿ ಶುರುವಾಗಿರುವ ನೂತನ ಸೇವಾಕೇಂದ್ರ ಲಾಭವನ್ನು ರಾಮನಗರದ ನಿವಾಸಿಗಳು ಪಡಿಯಬೇಕು ಎಂದು ಸಲಹೆ ನೀಡಿದರು.ಸ್ವಚ್ಛ ಮತ್ತು ಆರೋಗ್ಯಕರ ಸಮಾಜಕ್ಕಾಗಿ ಆಧ್ಯಾತ್ಮಿಕ ಸಬಲೀಕರಣ ಈ ವರ್ಷದ ಧ್ಯೇಯ ವಾಕ್ಯವಾಗಿದ್ದು ನಾವೆಲ್ಲರೂ ಸೇರಿ ಸಮಾಜವನ್ನು ಉನ್ನತ ಮಟ್ಟಕ್ಕೆ ತರೋಣ ಶಿರಸಿ ಸೇವಾ ಕೇಂದ್ರದ ಸಂಚಾಲಕಿ ವೀಣಾ ಅವರು ಕಾರ್ಯಕ್ರಮದ ನಿರೂಪಣೆ ಮಾಡುವಾಗ
ಕರೆ ನೀಡಿದರು. ವಂದನಾರ್ಪಣೆ ಪದ್ಮ ಸಂಚಾಲಕಿ ಹಳಿಯಳ ಇವರು ನಡೆಸಿಕೊಟ್ಟರು
ನಗರದ ಪ್ರಮುಖ ಬೀದಿಗಳಲ್ಲಿ ಪರಮಾತ್ಮನ ದಿವ್ಯ ಸಂದೇಶ ಸಾರುವ ಶಾಂತಿ ಸದ್ಭಾವನಾ ಯಾತ್ರೆ ಏರ್ಪಡಿಸಲಾಗಿತ್ತು. ಸರ್ವ ಧರ್ಮದವರಿಗೆ ಭಗವಂತ ಒಬ್ಬನೇ ಹೊಂಗಿರಣ ತಂಡ ಹಳಿಯಾಳ್ ಇವರಿಂದ ಗೊಂಬೆ ಆಟ ತುಂಬಾ ಆಕರ್ಷಕವಾಗಿತ್ತು.