ದರ್ಶನ್ ಹಿಂಬಾಲಿಸಿದ ವಿಜಯಲಕ್ಷ್ಮಿ
ಬೆಂಗಳೂರು,ಜೂ.೧೨-ಕೊಲೆ ಪ್ರಕರಣದಲ್ಲಿ ಕನ್ಪಡದ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಆತನೊಂದಿಗೆ ಇನ್ನೂ ೧೩ ಮಂದಿಯನ್ನು ಬಂಧಿಸಲಾಗಿದೆ, ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಘಟನೆಯ ನಂತರ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ ಕೂಡಾ ಹಾಕಿಲ್ಲ.
ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಬರ್ಭರ ಹತ್ಯೆ ಪ್ರಕರಣ ಇದಾಗಿದೆ.
ಇದೀಗ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದರ್ಶನ ಅವರನ್ನು ಅನ್ ಫಾಲೋ ಮಾಡಿದ್ದಾರೆ, ದರ್ಶನ್ ಜೊತೆಗಿನ ಡಿಪಿಯನ್ನೂ ಸಹ ತೆಗೆದು ಹಾಕಿದ್ದಾರೆ. ನಿನ್ನೆ ಪತ್ನಿಗೆ ಫೋನ್ ಮಾಡಿ ಕರೆ ಮಾಡುವಾಗ ನಾನೇನೂ ತಪ್ಪು ಮಾಡಿಲ್ಲ ಎಂದು ವಿಜಯಲಕ್ಷ್ಮಿಗೆ ನಟ ದರ್ಶನ್ ಹೇಳಿದ್ದಾರೆ ಎನ್ನಲಾಗಿದೆ.
ಇದಾದ ಬಳಿಕ ಇದೀಗ ವಿಜಯಲಕ್ಷ್ಮಿ ದರ್ಶನ್ ತಮ್ಮ ಬಳಿ ಇದ್ದ ಡಿಪಿಯನ್ನು ಅನ್ ಫಾಲೋ ಮಾಡಿ ತೆಗೆದು ಹಾಕಿದ್ದಾರೆ. ಈ ಒಂದು ಘಟನೆಯಿಂದ ದರ್ಶನ್ ಮತ್ತು ಅವರ ಪತ್ನಿ ವಿಜಯ ಲಕ್ಷ್ಮಿ ದಾಂಪತ್ಯದಲ್ಲಿ ಬಿರುಕು ಮೂಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.