ಮಗುವಿನ ಲಿವರ್ ಸಮಸ್ಯೆಗೆ ಸ್ಪಂದಿಸಿದ ಕನಕ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಸೆ.25 ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ನಗರದ ಎರಡು ವರೆ ವರ್ಷದ  ರಿಷಿ ಎಂಬ ಮಗುವಿನ ಶಸ್ತ್ರಚಿಕಿತ್ಸೆಗೆ ಜೈ ಹನುಮಾನ್ ಸರ್ಜಾ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಎಂ.ಜಿ ಕನಕ  10  ಸಾವಿರ ರೂ ನೀಡಿ ಮಾನವೀಯತೆ ಮೆರೆದಿದ್ದಾರೆ.
ಪುಟ್ಟ ಮಗುವಿನ ಆರೋಗ್ಯ ಸ್ಥಿತಿ ನೋಡಿ ನನಗೆ ಅಯ್ಯೋ ಅನಿಸಿತು. ಈ ಚಿಕ್ಕ ವಯಸ್ಸಿನಲ್ಲಿ ಲಿವರ್ ಸಮಸ್ಯೆ ಎಂದರೆ ಹೇಗೆ ಎಂದು ಆಶ್ಚರ್ಯ ಕೂಡ ಆಯಿತು. ಮಗುವಿನ ಶಸ್ತ್ರಚಿಕಿತ್ಸೆಗೆ 22ಲಕ್ಷ ಹಣ ಬೇಕಿದೆ.
ಬರುವ ಅಕ್ಟೋಬರ್ 6 ಕ್ಕೆ ಧ್ರುವ ಸರ್ಜಾ ಹುಟ್ಟುಹಬ್ಬ ಆಚರಣೆಗಾಗಿ ತೆಗೆದಿಟ್ಟಂತಹ 10,000 ರೂ ಗಳನ್ನು ಮಗುವಿನ ಚಿಕಿತ್ಸೆಗಾಗಿ ನೀಡಿ, ನನ್ನ ಕೈಲಾದ ಸಹಾಯವನ್ನು ಮಾಡಿದ್ದೇನೆ ಹಾಗೂ ನನ್ನ ಸ್ನೇಹಿತರಿಗೆ, ಎಲ್ಲಾ ಧ್ರುವ ಸರ್ಜಾ ಅವರ ಅಭಿಮಾನಿಗಳಿಗೆ ಹೇಳಿ ಅವರ ಕಡೆಯಿಂದ ಆದಷ್ಟು ಸಹಾಯ ಮಾಡಿಸುತ್ತೇನೆ ಎಂದು ಎಂ.ಜಿ ಕನಕ  ಹೇಳಿದ್ದಾರೆ.
ಈ ಸಂದರ್ಭದಲ್ಲಿ ಉಮಾರ್ ಫಾರೂಕ್, ಚಂದ್ರಶೇಖರ್ ಇದ್ದರು.