ಹಬೋಹಳ್ಳಿ :ಬೆಳ್ಳಂ ಬೆಳಗ್ಗೆ ಕೆಕೆಆರ್ ಟಿಸಿ  ಬಸ್ ಪಲ್ಟಿ.
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಸೆ.25  ಪಟ್ಟಣದ ಹೊರವಲಯದ ಮಾಲವಿ ಕ್ರಾಸ್ ಬಳಿ ಕೆಎಸ್ಆರ್ ಟಿಸಿ ಬಸ್ಸೊಂದು ರಸ್ತೆ ಪಕ್ಕದಲ್ಲಿ ಪಲ್ಟಿಯಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಹೊಸಪೇಟೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಬಸ್ ನಲ್ಲಿ ಸುಮಾರು 35 ಪ್ರಯಾಣಿಕರು ಇದ್ದರು. ಅದೃಷ್ಟವಶಾತ್ ಯಾವ ಪ್ರಯಾಣಿಕರು ಜೀವಹಾನಿ ಸಂಭವಿಸಿಲ್ಲ. ಡ್ರೈವರ್, ಕಂಡಕ್ಟರ್ ಸೇರಿದಂತೆ ಎಲ್ಲಾ ಪ್ರಯಾಣಿಕರು ಸೇಫಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ
ಡಿಪೋ ವ್ಯವಸ್ಥಾಪಕ ಎನ್.ನೀಲಪ್ಪ ಸ್ಥಳಕ್ಕೆ ಧಾವಿಸಿ ಪ್ರಯಾಣಿಕರ ಸುರಕ್ಷತೆಗೆ ನಿಗಾ ವಹಿಸಿದ್ದಾರೆ. ಕೂಡಲೇ ಪ್ರಯಾಣಿಕರಿಗೆ ತೊಂದರೆಯಾಗದಂತೆ ಘಟಕದಿಂದ ಬಸ್ ವ್ಯವಸ್ಥೆ ಕಲ್ಪಿಸಿ ಪ್ರಯಾಣಕ್ಕೆ ಅನುಕೂಲ ಮಾಡಿದ್ದಾರೆ.
ಎದುರುಗಡೆ ಬರುತ್ತಿದ್ದ ಲಾರಿಯವನ ಅಜಾಗರೂಕತೆಯನ್ನು ಗಮನಿಸಿ ಬಸ್ ಚಾಲಕ ರಸ್ತೆ ಕೆಳಗಡೆ ಬಸ್ ಇಳಿಸಿದ್ದಾರೆ. ಸುರಿದಿದ್ದ ಮಳೆಗೆ ತೇವಗೊಂಡಿದ್ದ ಮಣ್ಣು ಕುಸಿತದಿಂದಾಗಿ ಬಸ್ ನಿಧಾನವಾಗಿ ನೆಲಕ್ಕುರಳಿದೆ ಹಾಗಾಗಿ ಪ್ರಾಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಡಿಪೋ ವ್ಯವಸ್ಥಾಪಕ ಎನ್.ನೀಲಪ್ಪ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.