ತಂಬ್ರಹಳ್ಳಿ ಅರಿವು ಕೇಂದ್ರದಲ್ಲಿ ಮಹಿಳೆಯರಿಗೆ ಡಿಜಿಟಲ್ ಸಾಕ್ಷರತೆ ತರಬೇತಿ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ : ಸೆ.25 ತಾಲೂಕಿನ ತಂಬ್ರಹಳ್ಳಿ  ಗ್ರಾಮ ಪಂಚಾಯಿತಿ ಅರಿವು ಕೇಂದ್ರದಲ್ಲಿ  ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರುಗಳಿಗೆ ಡಿಜಿಟಲ್ ಸಾಕ್ಷರತಾ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ಯ ಇಲಾಖೆ ಹಾಗೂ ಶಿಕ್ಷಣ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು. ಗ್ರಾಮ ಡಿಜಿ ವಿಕಸನದ  ಜಿಲ್ಲಾ ಸಂಯೋಜಕ ಬಸವರಾಜ್ ಬಿ.ಎ. ಭಾಗವಹಿಸಿ ತರಬೇತಿ ನೀಡಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಮೊಬೈಲ್ ಬಳಕೆ ಅನಿವಾರ್ಯವಾಗಿದೆ.
ಸ್ಟೋರೇಜ್ ಪುಲ್ ಹಾಗೂ ಸೆಟಿಂಗ್ಸ ಬಗ್ಗೆ ಮಾಹಿತಿಯನ್ನು ಪ್ರತಿಯೊಬ್ಬರೂ ಪಡೆಯಬೇಕು, ಪ್ರಸ್ತುತ ದಿನಗಳಲ್ಲಿ ಆನ್ ಲೈನ್ ವಂಚನೆಗಳು ಹೆಚ್ಚಾಗುತ್ತಿದ್ದು ಜಾಗೃತರಾಗಿ ಮೊಬೈಲ್ ಉಪಯೋಗಿಸಬೇಕು, ಯಾರಾದರೂ ಅಪ್ಲಿಕೇಶನ್ ಡೌನ್ಲೋಡ್ ಹಾಗೂ ಒಟಿಪಿ ಕಳಿಸಿ ನಿಮ್ಮ ಅಕೌಂಟ್ ನಲ್ಲಿ ಹಣ ಹೊಡೆಯುವ ಜಾಲದ ಬಗ್ಗೆ ಜಾಗೃತರಾಗಿ ಡಿಜಿಟಲ್‌ ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ವಿವರವಾಗಿ  ತಿಳಿಸಿದರು. ಗ್ರಂಥಾಲಯ ಮೇಲ್ವಿಚಾರಕ ಟಿ.ಪಾಂಡುರಂಗಪ್ಪ ಹಾಗೂ ಶ್ರೀ ಬಂಡೇ ರಂಗನಾಥೇಶ್ವರ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸ್ವಸಹಾಯ ಸಂಘದ 25 ಜನ ಮಹಿಳಾ ಸದಸ್ಯರುಗಳು ಭಾಗವಹಿಸಿದ್ದರು
. ಈ ತರಬೇತಿಯು ತುಂಬಾ ಉಪಯುಕ್ತ ಮಾಹಿತಿಗಳ ಬಗ್ಗೆ ತಿಳಿಸಲಾಗಿದೆ ಎಂದು ಮಹಿಳಾ ಸ್ವಸಹಾಯ ಸಂಘದ ಸದಸ್ಯರುಗಳು ಅಭಿಪ್ರಾಯ ವ್ಯಕ್ತಪಡಿಸಿದರು. 5 ಸದಸ್ಯರಿಗೆ ಹಂತ 2 ಅಧಿವೇಶನ ಕುರಿತು ತರಬೇತಿ ನೀಡಲಾಯಿತು.20 ಸದಸ್ಯರಿಗೆ ಹಂತ 1 ಅಧಿವೇಶನ ಕುರಿತು ಮಾಹಿತಿ ತಿಳಿಸಿದರು.