ಪೈಪ್ ಸ್ಥಳಾಂತರ ಕಾಮಗಾರಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.25: ನಗರದ ನಾರಾಯಾಣರಾವ್ ಪಾರ್ಕ್ ನಿಂದ ಇಂದಿರಾ ಸರ್ಕಲ್ ವರೆಗಿನ ಕುಡಿಯುವ ನೀರಿನ ಪೈಪ್ ಸ್ಥಳಾಂತರ ಕಾಮಗಾರಿ ಕಳೆದ ಮೂರು ದಿನಗಳಿಂದ ನಡೆದಿದ್ದು ನಾಳೆಗೆ ಮುಗಿಯಲಿದೆ.
ಗಡಗಿ ಚೆನ್ನಪ್ಪ ಸರ್ಕಲ್ ನಿಂದ ಕೈಗೊಂಡಿರುವ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗೆ ಈ ಪೈಪ್ ಲೈನ್ ಅಡ್ಡಿಯಾಗಿತ್ತು. ಈ ಹಿನ್ನಲೆಯಲ್ಲಿ ರಸ್ತೆ ಕಾಮಗಾರಿ ಸಹ ಸ್ಥಗಿತಗೊಳಿಸಲಾಗಿತ್ತು. ಈಗ ಪೈಪ್ ಸ್ಥಳಾಂತರಿಸುವ ಕಾರ್ಯ ನಡೆದಿದೆ.
ಅದಕ್ಕಾಗಿ ಐದು ದಿನಗಳ ಕಾಲ ನಾರಾಯಣರಾವ್ ಪಾರ್ಕ್ ಮದರ್ ಟ್ಯಾಂಕ್ ನಿಂದ ನೀರು ಸರಬರಾಜು ಸ್ಥಗಿತಗೊಳಿಸಲಾಗಿತ್ತು.  ಇಂದು ಸಂಜೆ ಇಲ್ಲವೇ ನಾಳೆ ಮುಂಜಾನೆ ಯೊಳಗೆ ಕಾಮಗಾರಿ ಮುಗಿಯಲಿದ್ದು ನಂತರ ನೀರು ಸರಬರಾಜು ಆರಂಭವಾಗಲಿದೆಂದು ಅಧಿಕಾರಿಗಳು ಹೇಳಿದ್ದಾರೆ.